ಡೀಸೆಲ್ ಕಳವು ಮಾಡುತ್ತಿದ್ದವನ ಬಂಧಿಸಿರುವ ತಾವರಗೇರಾ ಪೊಲೀಸರು ಆತನಿಂದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿರುವುದು. ಪಿಎಸ್‌ಐ ನಾಗರಾಜ, ಎಎಸ್‌ಐ ಮಲ್ಲಪ್ಪ ಇತರ ಸಿಬ್ಬಂದಿ ಇದ್ದರು. 
ಜಿಲ್ಲೆ

ತಾವರಗೇರಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಡೀಸೆಲ್ ಕಳವು ಮಾಡುತ್ತಿದ್ದವ ಅಂದರ್

Gangavati - Mohan Kumar H R

ತಾವರಗೇರಾ: ಹಲವು ತಿಂಗಳಿನಿಂದ ತಾವರಗೇರಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ವಾಹನ ಹಾಗೂ ಜನರೇಟರ್‌ಗಳಲ್ಲಿ ಡೀಸೆಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮಸ್ಕಿ ಪಟ್ಟಣದ ಗಾಂಧಿನಗರ ನಿವಾಸಿ ಶಶಿಕುಮಾರ ಬಂಧಿತ. ಈತನಿಂದ 175 ಲೀ. ಡೀಸೆಲ್, ಮೂರು ಕ್ಯಾನ್‌ಗಳು, ಒಂದು ಕಾರು ಹಾಗೂ 12 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಪಿಎಸ್‌ಐ ನಾಗರಾಜ ಕೋಟಗಿ, ಎಎಸ್‌ಐ ಮಲ್ಲಪ್ಪ ವಜ್ರದ, ಬಸವರಾಜ, ಶಂಕರ ಇನ್ನಿತರರು ಕಾರ್ಯಾಚರಣೆಯಲ್ಲಿದ್ದರು.