ಜಿಲ್ಲೆ

ವಾಹನ ಬಿದ್ದು ನಾಲ್ವರಿಗೆ ಗಾಯ

Belagavi

ಬೆಳಗಾವಿ: ಕಿತ್ತೂರು ತಾಲೂಕಿನ ಕೈಗಾರಿಕೆ ಪ್ರದೇಶದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನೊಬ್ಬನ ಅಜಾಗರೂಕತೆಯಿಂದ ಸೋಮವಾರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ತೀವ್ರ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದ ವಿಜಯ ಶೆಟ್ಟಿ (48), ಪ್ರಮೋದಾ (44), ಸಂಜು (44), 7 ವರ್ಷದ ಬಾಲಕ ಹಾಗೂ ವಾಹನ ಚಾಲಕ ಗಣೇಶ ಪೂಜೇರ (55) ಗಾಯಗೊಂಡವರು. ಲಾಕ್‌ಡೌನ್ ಸಡಿಲಿಕೆಯಿಂದ ಮಹಾರಾಷ್ಟ್ರದ ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ವಾಹನದಲ್ಲಿ ಕುಂದಾಪುರಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಕಿತ್ತೂರು ಕೈಗಾರಿಕೆ ಪ್ರದೇಶದ ಬಳಿ ಚಾಲಕನ ಅಜಾಗರೂಕತೆಯಿಂದ ರಸ್ತೆ ಪಕ್ಕದ ಚರಂಡಿಗೆ ಬಿದ್ದು ವಾಹನದಲ್ಲಿದ್ದವರು ತೀವ್ರ ಗಾಯಗೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಿತ್ತೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

ವಾಹನ ಬಿದ್ದು ನಾಲ್ವರಿಗೆ ಗಾಯ: ಬೆಳಗಾವಿ: ಕಿತ್ತೂರು ತಾಲೂಕಿನ ಕೈಗಾರಿಕೆ ಪ್ರದೇಶದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನೊಬ್ಬನ ಅಜಾಗರೂಕತೆಯಿಂದ ಸೋಮವಾರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ತೀವ್ರ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.