ಜಿಲ್ಲೆ

ಹಿರಿಯರ ಅಥ್ಲೆಟಿಕ್ಸ್​ನಲ್ಲಿ ಚಿನ್ನದ ಪದಕ

ಹುಬ್ಬಳ್ಳಿ: ಫಿಲಿಪೈನ್ಸ್​ನಲ್ಲಿ ಆಯೋಜಿಸಿದ್ದ 22ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಹುಬ್ಬಳ್ಳಿಯ ವಿರುಪಾಕ್ಷಗೌಡ ಪಾಟೀಲ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

83 ವರ್ಷದ ವಿರುಪಾಕ್ಷಗೌಡ ಅವರು 80-84 ವಯೋಮಿತಿಯ ವಿಭಾಗದಲ್ಲಿ ಸ್ಪರ್ಧಿಸಿದ್ದರು. 5 ಸಾವಿರ ಮೀಟರ್ ದೂರವನ್ನು ಅವರು 40ನಿಮಿಷ, 22.23 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದರು.