ಗದಗ : ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ, ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ ಎಂಬ ವಚನದ ಸಾರವನ್ನು ಶ್ರೀ ವೀರೇಶ್ವರ ಪುಣ್ಯಾಶ್ರಮ ಮತ್ತು ಶಿವಯೋಗ ಮಂದಿರವು ಸುಳ್ಳು ಮಾಡಿದೆ ಎಂದು ಶಿರಹಟ್ಟಿಯ ಜ.ಭಾವ್ಯಕ್ಯತಾ ಮಹಾಸಂಸ್ಥಾನಪೀಠದ ಪೂಜ್ಯಶ್ರೀ ಜ.ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂಚಾಕ್ಷರ ಗವಾಯಿಗಳವರ ೮೦ನೇ ಪುಣ್ಯ ಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ೧೪ನೇ ಪುಣ್ಯಸ್ಮರಣೋತ್ಸವ ಉಭಯ ಗುರುಗಳ ಜಾತ್ರಾ ಮಹೋತ್ಸವ ಅಂಗವಾಗಿ ರವಿವಾರ ಜರುಗಿದ ಕೀರ್ತನ ಸಮ್ಮೇಳನ ಹಾಗೂ ಅಂಧರಗೋಷ್ಠಿ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿ, ಎಲ್ಲಿಯೂ ಸಲ್ಲದವರನ್ನು ಎಲ್ಲೆಡೆಯೂ ಸಲ್ಲುವಂತೆ ಈ ಪುಣ್ಯಾಶ್ರಮದ ಉಭಯ ಗುರುಗಳು ಹಾಗೂ ಶಿವಯೋಗ ಮಂದಿರದ ಗುರುಗಳು ಮಾಡಿದ್ದಾರೆ. ಶ್ರೀ ವಿರೇಶ್ವರ ಪುಣ್ಯಾಶ್ರಮವು ಈ ಹಿಂದೆ ಸಾಧನೆಯಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದೆ. ಈಗ ಶಿಸ್ತಿನಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಆಶ್ರಮ ಬೆಳೆದಂತೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಉಭಯ ಗುರುಗಳು ಕಂಡಿರುವ ನೂರು ವರ್ಷಗಳ ಕನಸು ಇಂದು ನನಸಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಧ್ಯಯನ ಆಗಬೇಕು ಜೊತಗೆ ಇಂಗ್ಲಿಷ್ ಮತ್ತು ಹಿಂದಿಗಳಲ್ಲಿ ವಚನಗಳನ್ನು ಇಲ್ಲಿ ಹಾಡುವಂತಾಗಬೇಕೆನ್ನುವುದು ನಮ್ಮ ಆಸೆಯಾಗಿದೆ ಎಂದು ಹೇಳಿದರು.
ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನಮಠದ ಪೂಜ್ಯಶ್ರೀ ಜ. ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆವಹಿಸಿ ಮಾತನಾಡಿ, ಉಭಯ ಶ್ರೀಗಳ ಶಿವಯೋಗ ಶಕ್ತಿ ಮತ್ತು ಹಾನಗಲ್ ಕುಮಾರೇಶ್ವರ ಶ್ರೀಗಳ ಭಕ್ತಿನಿಷ್ಟೆಯ ಫಲವಾಗಿ ಪುಣ್ಯಾಶ್ರಮ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಉಭಯ ಶ್ರೀಗಳು ಅಂತರAಗದ ಕಣ್ಣಿನಿಂದ ಇಡಿ ಜಗತ್ತನ್ನು ಕಂಡವರು. ನೂರಾರು ವರ್ಷಗಳ ಒಂದು ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ವಿದ್ಯಾರ್ಜನೆ ನೀಡುವದು ಸುಲಭದ ಸಾಧನೆ ಅಲ್ಲ. ಒಂದು ವಿಶ್ವ ವಿದ್ಯಾಲಯ ಮಾಡದ ಕಾರ್ಯವನ್ನು ವಿರೇಶ್ವರ ಪುಣ್ಯಾಶ್ರಮ ಮಾಡಿದೆ. ಓದಿದವರು ಎಲ್ಲರೂ ಪ್ರತಿಭಾವಂತರಾಗಬೇಕು ಎಂದೇನು ಇಲ್ಲ, ಪಂಚಾಕ್ಷರಿ ಶ್ರೀಗಳು ದೃಷ್ಟಿ ಇಟ್ಟು ಓದಿ.ಸಿದ ಪಂ ಪುಟ್ಟರಾಜ ಗವಾಯಿಗಳವರು ಇಂದು ಮಹಾಪುರುಷರಾಗಿದ್ದಾರೆ. ಎಲ್ಲಿಯ ವರೆಗೆ ಹಾನಗಲ್ ಕುಮಾರೇಶ್ವರ ಶ್ರೀಗಳನ್ನು ನೆನೆಯುತ್ತೆವೆ ಅಲ್ಲಿಯವರೆಗೆ ಪುಣ್ಯಾಶ್ರಮ ಇರುತ್ತದೆ ಎಂದು ಹೇಳಿದರು.
ಗದುಗಿನ ಶಿವಾನಂದ ಮಠದ ಪೂಜ್ಯಶ್ರೀ ಜ.ಅಭಿನವ ಶಿವಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಅಡ್ನೂರ ದಾಸೋಹ ಶ್ರೀಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಮಹಾಸ್ವಾಮಿಗಳು, ಹರ್ಲಾಪುರ ಕೊಟ್ಟೂರೇಶ್ವರ ಶ್ರೀಮಠದ ಪೂಜ್ಯಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಹೋತನಹಳ್ಳಿ ಸಿಂದಗಿ ಶಾಖಾ ಮಠದ ಪೂಜ್ಯಶ್ರೀ ಶಂಭುಲಿAಗ ಶಿವಾಚಾರ್ಯ ಮಹಾಸ್ವಾಮಿಗಳು, ಅಂತೂರ ಬೆಂತೂರಿನ ಪೂಜ್ಯಶ್ರೀ ಕುಮಾರದೇವರು, ನಿಡಗುಂದಿ ಸಂಶಿ ಹಿರೇಮಠದ ಪೂಜ್ಯಶ್ರೀ ಮೃತ್ಯುಂಜಯ ಶಿವಾಚಾರ್ಯ ಮಹಾ ಸ್ವಾಮಿಗಳು, ಕೋಡೆಕನೂರಿನ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಗದ್ಗುರು ಮಹಾಸನ್ನಿದಿಯವರಿಂದ ಪರಮಪೂಜ್ಯ ಲಿಂ. ಪಂ.ಪAಚಾಕ್ಷರಿ ಗವಾಯಿಗಳ “ನೂರೆಂಟು ನಾಮಾವಳಿಗಳು” ಗ್ರಂಥ ಬಿಡುಗಡೆ “ಶ್ರೀ ಗುರು ವಚನಾಮೃತ ಹಾಗೂ ಆರೋಹ ಸಿರಿ” ಧ್ವನಿ ಸುರುಳಿ ಬಿಡುಗಡೆಗೊಂಡವು.
ವೇದಿಕೆ ಮೇಲೆ ಬಾದಾಮಿಯ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಆರ್.ವಿ.ಸಂಗಮೇಶ ಗವಾಯಿ, ಬಿ.ಬಿ.ಅಸೂಟಿ, ಶಿವಲೀಲಾ ಅಕ್ಕಿ, ಡಾ. ಶ್ರೀಮತಿ ವಿ.ವಿ.ಅಕ್ಕಿ, ಅನಿತಾ ಅಸೂಟಿ, ಆನಂದಯ್ಯಸ್ವಾಮಿ ವಿರಕ್ತಮಠ, ಪಂಕಜ ಬಾಪಣಾ, ಶಿವರುದ್ರಪ್ಪ ಇಟಗಿ, ಎಸ್. ಎಂ.ಗೌಡರ, ಸಾಧಿಕ ನರಗುಂದ, ಅಯ್ಯಪ್ಪ ನಾಯ್ಕರ ಮುಂತಾದವರು ಉಪಸ್ಥಿತರಿದ್ದರು. ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು.
ಶಿವಮೊಗ್ಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶಾಖಾ ಆಶ್ರಮದ ಅಂಧ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಬೂದೀಶ್ವರದ ಸಿದ್ದೇಶ್ವರ ಶಾಸ್ತಿçಗಳು ಸ್ವಾಗತಿಸಿದರು. ರೋಣದ ಶೇಖರಯ್ಯ ಶಾಸ್ತಿçಗಳು ಸಭಾ ನಿರೂಪಿಸಿದರು.
ಇದಕ್ಕೂ ಮೊದಲು ಬೆಳಿಗ್ಗೆ ನಡೆದ ಶ್ರೀಗುರುರಕ್ಷೆ ಕಾರ್ಯಕ್ರಮದಲ್ಲಿ ಕಪೋತಗಿರಿ ನಂದಿವೇರಿ ಶ್ರೀಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಅಡ್ನೂರ ದಾಸೋಹ ಶ್ರೀಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಪೂಜ್ಯಶ್ರೀ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶ್ರೀನಿವಾಸ ಪಾಸ್ಟೆ, ಸಂಕಪ್ಪ ಹುಲ್ಲೂರ, ಗಿರೀಶ ಹಿರೇಮಠ, ಪ್ರಕಾಶ ಮೋರ‍್ಸ್ ಅವರು ಸೇರಿದಂತೆ ಗುತ್ತಿಗೆನೂರ, ಎಮ್ಮಿಗನೂರ, ಬೆಳವಣಿಕಿ ಗ್ರಾಮದ ಭಕ್ತರಿಗೆ ಶ್ರೀಗುರಕ್ಷೆ ನೀಡಲಾಯಿತು. ನಂತರ ರಾತ್ರಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂ.ಪAಚಾಕ್ಷರಿ ಗವಾಯಿಗಳವರ ನಾಟ್ಯ ಸಂಘದಿAದ “ಗಡಿಗೆ ಜ್ವಾಕಿ ತಂಗಿ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.