ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯ ಯುವಕ ವೀರೇಶ ಸಾವಿನ ಪ್ರಕರಣಕ್ಕೆ ಸಂಬAಽಸಿದAತೆ ಸಿಐಡಿ ತನಿಖೆಗೆ ಶಿ-Áರಸ್ಸು ಮಾಡಲಾಗಿದು,್ದ ಗುರುವಾರದಿಂದ ಸಿಐಡಿ ತನಿಖೆ ಪ್ರಾರಂಭವಾಗಲಿದೆ ಎಂದು ಬಳ್ಳಾರಿ ವಲಯದ ಪೊಲೀಸ ಮಹಾನಿರ್ದೇಶಕ ಬಿ.ಎಸ್.ಲೋಕೇಶ ಕುಮಾರ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರ ನಗರದ ನಿವಾಸಿ ವಿರೇಶ ಮತ್ತು ಪತ್ನಿ ನರಸಮ್ಮ ಮಧ್ಯೆ ನಡೆದ ಜಗಳ ಕುರಿತಂತೆ ಮಹಿಳಾ ಠಾಣೆಯಲ್ಲಿ ವಿಚಾರಣೆ ನಡೆಸಿ ಆರೋಪಿಯನ್ನು ಬಿಡುಗಡೆಗೊಳಿಸಲಾಗಿತ್ತು. ಪುನಃ ೧೧೨ ಕರೆ ಮಾಡಿ ಜಗಳ ನಡೆಯುತ್ತಿರುವದೂರಿನ ಮೇರೆಗೆ ಪಶ್ಚಿಮ ಠಾಣೆಯ ಪೊಲೀಸರು ಕರೆತಂದು ವಿಚಾರಣೆ ನಡೆಸಿದ್ದರು. ಸಿಪಿಐ ನಾಗರಾಜ ಮೇಕಾ ಮತು ್ತಪಿಎಸ್‌ಐ ಮಂಜುನಾತ ಇವರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಮೃತ ವಿರೇಶನ ಪತ್ನಿ ಜ್ಯೋತಿ ನೀಡಿದ ದೂರಿನ ಮೇರೆಗೆ ನಿಷ್ಪಕ್ಷಪಾತ ತನಿಖೆಗೆ ಅಡ್ಡಿಯಾಗದಂತೆ ಇಬ್ಬರನ್ನು ಸೇವೆಯಿಂದ ಅಮಾನತ್‌ಗೊಳಿಸಲಾಗಿದೆ. ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆಗೆ ಸೂಚಿಸಲಾಗಿದೆ.
ಪ್ರಕರಣವನ್ನು ಸಿಐಡಿಗೆ ಶಿ-Áರಸ್ಸು ಮಾಡಿದ್ದರಿಂದ ತನಿಖೆಯನ್ನು ಸಿಐಡಿ ತಂಡ ಮುಂದುವರೆಸಲಿದೆ. ತನಿಖಾವರದಿ ಆಧಾರ ಮೇಲೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ತುರ್ವಿಹಾಳ ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ಮಾರಾಕಾಸöಗಳನ್ನು ಹಿಡಿದು ಮೊಲಗಳನ್ನು ಬೇಟೆಯಾಡಿರುವ ಪ್ರಕರಣಕ್ಕೆ ಸಂಬAದಿಸಿದAತೆ ಅರಣ್ಯ ಇಲಾಖೆಯವರು ದೂರುದಾಖಲಿಸಿಕೊಂಡಿದ್ದಾರೆ. ವನ್ಯಜೀವಿಸಂರಕ್ಷನಾ ಕಾಯ್ದೆಯಡಿ ದೂರು ದಾಖಲಾಗಿ ತನಿಖೆ ನಡೆಯುತ್ತಿದೆ. ಮಾರಾಕಾಸöಗಳನ್ನು ಹಿಡಿದು ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿರುವದು ಗಮನಕ್ಕೆ ಬಂದಿದ್ದು ದೂರು ದಾಖಲಿಸುವಕುರಿತು ಕ್ರಮ ವಹಿಸಲಾಗುತ್ತಿದೆ.ಅರಣ್ಯ ಇಲಾಖೆಯವರೇ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುತ್ತಾರೆ ಎಂದರು.
ಸೈಬರ್ ಕ್ರೆÊಂ ಅಪರಾಧಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿಇಎನ್
ಠಾಣೆಗಳನ್ನು ಸ್ಥಾಪಿಸಲಾಗಿದೆ. ಡಿವೈಎಸ್‌ಪಿ ಮಟ್ಟದ ಅಽಕಾರಿಗಳನ್ನು ನಿಯುಕ್ತಿಗೊಳಿಸಿ ಎರಡು ಹಂತದ ತರಬೇತಿ
ನೀಡಲಾಗುತ್ತಿದೆ. ಸಾರ್ವಜನಿಕರು ವಂಚನೆಗೊಳಗಾದೇ ಎಚ್ಚರವಹಿಸಬೇಕಿದೆ.೧೯೩೦ ಕ್ಕೂ ದೂರು ನೀಡಬೇಕೆಂದರು.
ಬಳ್ಳಾರಿ ವಿಭಾಗದಲ್ಲಿ ಪಿಎಸ್‌ಐ ಮತ್ತು ಪೇದೆಗಳ ಖಾಲಿ ಹುದ್ದೆಗಳ ಸಂಖ್ಯೆಇಳಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಪಿ ಎಂ.ಪುಟ್ಟಮಾದಯ್ಯ ಇದ್ದರು.