ಜಿಲ್ಲೆ

ನಿಷ್ಕಲ್ಮಶ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಲಭ್ಯ : ವೀರಮಂಗಲ ಶಾಲೆಯ ಕಾರ್ಯಕ್ರಮದಲ್ಲಿ ವಸಂತ ಅನಿಸಿಕೆ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಶಾಲೆಯಲ್ಲಿ ನಿಷ್ಕಲ್ಮಶ ಸೇವೆ ಸಲ್ಲಿಸುವ ಮನಸ್ಸುಗಳಿದ್ದಾಗ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ಶಾಲೆಗೆ ಪುಷ್ಟಿ ರಾಜ್ಯ ಪ್ರಶಸ್ತಿ ಬಂದಿರುವುದು ನಮಗೆ ಹೆಮ್ಮೆ ಎಂದು ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ವಸಂತ ವೀರಮಂಗಲ ಹೇಳಿದರು.

ವೀರಮಂಗಲದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಶಾಲಾ ವಾರ್ಷಿಕ ಚಟುವಟಿಕೆಗಳ ವರದಿ ‘ವೀರಧಾರೆ’ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಶಸ್ತಿ ಜತೆಗೆ ದೊರೆತ ನಗದು ಬಹುಮಾನದಲ್ಲಿ ಶಾಲೆಗೆ ಖರೀದಿಸಿದ ಕಂಪ್ಯೂಟರ್, ಇನ್ವರ್ಟರ್, ಗ್ರೈಂಡರ್ ಮತ್ತು ಮೈವನ್ನು ಗ್ರಾಪಂ ಸದಸ್ಯೆ ಪದ್ಮಾವತಿ ಉದ್ಘಾಟಿಸಿದರು. ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿ ಮಕ್ಕಳಿಗೆ ಬ್ಯಾಗ್ ಪುಸ್ತಕ ಕಿಟ್ ವಿತರಿಸಲಾಯಿತು. ವಿದ್ಯಾರ್ಥಿಗಳು ಶಾಲೆಗೆ ಗ್ಲಾಸ್ ಕಪಾಟು ಕೊಡುಗೆ ನೀಡಿದರು. ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು.

ಮಾರ್ಗದರ್ಶಕ ಶಿಕ್ಷಕ ವೆಂಕಟೇಶ್, ಮುಖ್ಯ ಶಿಕ್ಷಕ ತಾರಾನಾಥ ಸವಣೂರು, ಎಸ್‌ಡಿಎಂಸಿ ಉಪಾಧ್ಯಕ್ಷೆ ನವ್ಯಾ, ಸದಸ್ಯರಾದ ಭವ್ಯಾ, ಅರ್ಚನಾ, ವಿನುತಾ, ಚಂದ್ರಾವತಿ, ನಳಿನಿ, ಹರೀಶ್ ಮಣ್ಣಗುಂಡಿ, ಸಂದೀಪ್ ಕಾಂತಿಲ, ರಜಾಕ್, ಶೋಭಾ, ಕವಿತಾ, ಹೇಮಾವತಿ, ಶಿಲ್ಪರಾಣಿ, ಸೌಮ್ಯಾ, ಸಂಚನಾ, ಸವಿತಾ ಮಧುಶ್ರೀ, ಚಂದ್ರಾವತಿ ಉಪಸ್ಥಿತರಿದ್ದರು. ಶ್ರೀಲತಾ ವಂದಿಸಿದರು. ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.