ಜಿಲ್ಲೆ

11 ರಂದು ವೀರಶೈವ ಲಿಂಗಾಯತ ಮಹಾಸಭಾದಿಂದ ಸೇವಾದೀಕ್ಷಾ

ತುಮಕೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಏ.11ರಂದು ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಸೇವಾದೀಕ್ಷಾ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್​.ಪರಮೇಶ್​ ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದು ವರ್ಷಕ್ಕೊಮ್ಮೆ ನೂತನ ಆಯ್ಕೆಯಾದ ಪದಾಧಿಕಾರಿಗಳು ಮಹಾಸಭಾ ಸೇವಾದೀಕ್ಷೆ ಪಡೆದು ಕಾಯಕನಿರತವಾಗುವುದು ಪರಂಪರೆ. ಅದರಂತೆ ಇತ್ತೀಚೆಗೆ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಸೇವಾದೀಕ್ಷೆ ಪಡೆಯುವ ಕಾರ್ಯಕ್ರಮ ಏ.11ರಂದು ಬೆಳಗ್ಗೆ 10.30ಕ್ಕೆ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದರು.

ಕೇಂದ್ರ ಸಚಿವ ವಿ.ಸೋಮಣ್ಣ ಉಪಸ್ಥಿತಿಯಲ್ಲಿ ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಕೆರೆಗೋಡು ರಂಗಾಪುರದ ಶ್ರೀಗುರುಪರದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು, ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಸಭಾದ ರಾಜ್ಯಾಧ್ಯಕ್ಷ ಶಂಕರ್​ ಬಿದರಿ, ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಸೇವಾದೀಕ್ಷಾ ಕಾರ್ಯಕ್ರಮಕ್ಕೆ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಡಾ.ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಷಡಕ್ಷರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿಗಳು ಆಗಮಿಸುವರು ಎಂದರು.

ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್​.ಸಚ್ಚಿದಾನಂದಮೂರ್ತಿ, ಕಾರ್ಯದರ್ಶಿ ಹೆಚ್​.ಎಂ.ರೇಣುಕಾ ಪ್ರಸನ್ನ ಮೊದಲಾದವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವರು. ಈ ವೇಳೆ 18 ಮಂದಿ ಸಾಧಕರಿಗೆ ಸನ್ಮಾನ, ವಿವಿಧ ಪ್ರಶಸ್ತಿ ಪುರಸ್ಕತರಿಗೆ ಗೌರವ ಸಮರ್ಪಣೆ ಮಾಡಲಾಗುವುದು.

ಸಭಾದ ಉಪಾಧ್ಯಕ್ಷ ಎಲ್​.ಪಿ.ರವಿಶಂಕರ್​, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್​ ಅಪ್ಪಾಜಪ್ಪ, ಖಜಾಂಚಿ ಆರ್​.ಬಿ.ಜಯಣ್ಣ, ಕಾರ್ಯದರ್ಶಿ ತಳವಾರಹಳ್ಳಿ ಟಿ.ಎಂ.ವಿಜಯಕುಮಾರ್​, ಟಿ.ಎಸ್​.ರುದ್ರಪ್ರಸಾದ್​, ಯುವ ಘಟಕ ಅಧ್ಯಕ್ಷ ಡಾ.ದರ್ಶನ್​ ಕೆ.ಎಲ್​, ಮಹಿಳಾ ಘಟಕ ಅಧ್ಯಕ್ಷ ಮಮತಾ ದಿವಾಕರ್​, ತಾಲ್ಲೂಕು ಅಧ್ಯಕ್ಷ ಎನ್​.ಜಯಣ್ಣ, ಕಾರ್ಯದರ್ಶಿ ಸದಾಶಿವಯ್ಯ, ವಿಶ್ವನಾಥ್​, ಸತ್ಯಮಂಗಲ ಜಗದೀಶ್​, ಉಮಮಹೇಶ್​, ಡಿ.ಎನ್​.ಯೋಗೀಶ್ವರ್​, ಶ್ರೀಧರ್​, ರಾಜಶೇಖರ್​ ಸುದ್ದಿಗೋಷ್ಠಿಯಲ್ಲಿದ್ದರು.