ಜಿಲ್ಲೆ

ವೀರಶೈವ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ

ಚಿತ್ರದುರ್ಗ: ನಗರದ ವೀರಶೈವ ಸಮಾಜದ ಎಸ್ಸೆಸ್ಸೆಲ್ಸಿ, ಸೆಕೆಂಡ್ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಿದೆ.

ಎಸ್ಸೆಸ್ಸೆಲ್ಸಿ, ಸೆಕೆಂಡ್ ಪಿಯುಸಿಯಲ್ಲಿ ಶೇ.85 ಮತ್ತು ಅಧಿಕ ಅಂಕಗಳಿಸಿದ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಹರು.

ನಗರದ ನೀಲಕಂಠೇಶ್ವರಸ್ವಾಮಿ ದೇವಾಲಯದಲ್ಲಿರುವ ಸಂಘದ ಕಚೇರಿಗೆ ಜೂನ್ 12 ರೊಳಗೆ ಅರ್ಜಿ ಸಲ್ಲಿಸಬಹುದು.

ಮಾಹಿತಿಗೆ 9986295285ನ್ನು ಸಂಪರ್ಕಿಸುವಂತೆ ಸಮಾಜದ ಕಾರ‌್ಯದರ್ಶಿ ಎನ್.ಬಿ.ವಿಶ್ವನಾಥ್ ತಿಳಿಸಿದ್ದಾರೆ.