ಜಿಲ್ಲೆ

ಫಲಿತಾಂಶ ಬರುವ ಮೊದಲೇ ಸಿಂಗಾಪುರಕ್ಕೆ ಹೋಗಿದ್ರೆಲ್ಲಾ !!

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ವಿಧಾನಸಭೆ ಚುನಾವಣೆ ಫಲಿತಾಂಶ ಬರುವ ಮೊದಲು ಕೂಡಾ ನಾನೇ ಸರ್ಕಾರ ಮಾಡ್ತಿನಿ ಅಂತ ಸಿಂಗಾಪುರಕ್ಕೆ ಹೋದ್ರಲ್ಲ. ಅವರು ಬಯಸಿದ ಹಾಗೇ ಆಗೋದಿಲ್ಲ. ಜನಗಳು ಏನ್ ಅಭಿಪ್ರಾಯ ಪಡುತ್ತಾರೊ ಹಾಗೇ ಆಗುತ್ತೆ. ಜನಗಳ ಅಭಿಪ್ರಾಯದ ಮೂಲಕ ಅತ್ಯಧಿಕ ಬಹುಮತದಿಂದ ಸರ್ಕಾರ ಮಾಡಿದ್ದಾರೆ. ಇವರು ಹೇಳಿದ ಹಾಗೇ ಆಗಲ್ಲ. ಜನ ಹೇಳಿದ ಹಾಗೇ ಆಗುತ್ತೆ ಎಂದು ಮಾಜಿ ಸಿಎಂ ಎಂ.ವೀರಪ್ಪ ಮೊಯಿಲಿ ಟಾಂಗ್ ಕೊಟ್ಟರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಮೈತ್ರಿ ಆದ ಮೇಲೆ ಸರ್ಕಾರ ಬಿಳಿಸುವ ಪ್ರಯತ್ನ ಮಾಡ್ತಿದ್ದಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅದು ಅವರಿಬ್ಬರಿಗೆ ಮಾತ್ರ ಗೊತ್ತು ಎಂದರು.

ಮೋದಿ ಮಧ್ಯಸ್ಥಿಕೆ ವಹಿಸಲಿ: ಕಾವೇರಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ಈ ಸಮಸ್ಯೆಗೆ ಇತಿಶ್ರೀ ಹಾಡಬೇಕಿರುವುದು ಈ ದೇಶದ ಪ್ರಧಾನಿ ಹಾಗೂ ಸುಪ್ರೀಂಕೋರ್ಟ್. ಇವರಿಬ್ಬರು ಮಧ್ಯ ಪ್ರವೇಶಿಸದೆ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಮೊಯಿಲಿ ತಿಳಿಸಿದರು.