ಪರಶುರಾಮಪುರ: ಸಮೀಪದ ದೊಡ್ಡಚೆಲ್ಲೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದೊಳಗೆ ಇರುವ ಸಾಂಸ್ಕೃಇಕ ವೀರ ಈರಣ್ಣಜ್ಜನ ಗದ್ದುಗೆ ಜೀರ್ಣೋದ್ಧಾರಕ್ಕೆ ತಾಲೂಕು ಆಡಳಿತ ಮುಂದಾಗಬೇಕು ಎಂದು ಗುಡಿಕಟ್ಟೆಯ ಭಕ್ತರು ಮನವಿ ಮಾಡಿದ್ದಾರೆ.
ಗದ್ದುಗೆಯ ಸುತ್ತಲೂ ವಿವಿಧ ಜಾತಿಯ ಮರ-ಗಿಡಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಪ್ರತೀ ವಾರಕ್ಕೊಮ್ಮೆ ಆಂಧ್ರ ಮತ್ತು ಕರ್ನಾಟಕದ ವಿವಿಧೆಡೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಆದರೆ, ಇಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ. ಜತೆಗೆ ಗದ್ದುಗೆ ಜೀರ್ಣೋದ್ಧಾರ ಆಗಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ದಿಲೀಪ್ ಎ.ಯಾದವ್, ಈರಣ್ಣ, ಕರಿಯಣ್ಣ, ದ್ಯಾಮಣ್ಣ, ಕಾಟಪ್ಪ, ತಿಮ್ಮಯ್ಯ, ಅಂಜಿನಪ್ಪ, ನಾಗರಾಜು ಪರಂದರ್, ಬುಜ್ಜಿ ನಾಗರಾಜು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.