ಜಿಲ್ಲೆ

ಸಂಸ್ಕಾರ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲನಿಯಲ್ಲಿರುವ ಎನ್​ಎಲ್​ಇ ಸೊಸೈಟಿಯ ಡಾ. ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 9 ಮತ್ತು 10ನೇ ತರಗತಿಯ ಶಾಲಾ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮ ‘ವಾರಿಧಿ-4.0’ ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಅತಿಥಿಯಾಗಿದ್ದ ಡಾ.ಜಿ.ವಿ. ಜೋಶಿ ರೋಟರಿ ಇಂಗ್ಲಿಷ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಸದಾನಂದ ಕಾಮತ ಮಾತನಾಡಿ, ಪ್ರತಿಭೆಗೆ ಅವಕಾಶಗಳು ಸದಾ ಒದಗಿ ಬರುತ್ತವೆ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಭವಿಷ್ಯದ ಬಗ್ಗೆ ಯೋಜಿಸುವಂತೆ ಮಾಡುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾಮಮೋಹನ್ ಎಚ್.ಕೆ. ಮಾತನಾಡಿ, ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ 30ಕ್ಕೂ ಹೆಚ್ಚು ಶಾಲೆಗಳ 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿರುವ ಈ ಪ್ರತಿಭಾನ್ವೇಷಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ನೃತ್ಯ ಸ್ಪರ್ಧೆಯಲ್ಲಿ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಜೀಶಾ ಚಂದನ್ ಪ್ರಥಮ, ರಾಯಾಪುರದ ಕೆಎಲ್​ಇ ಸಿಬಿಎಸ್​ಇ ಪ್ರೌಢ ಶಾಲೆಯ ಸೃಷ್ಟಿ ಪಾಟೀಲ ದ್ವಿತೀಯ ಬಹುಮಾನ ಪಡೆದುಕೊಂಡರು.

ಇಂಗ್ಲಿಷ ಶಬ್ಧ ಸಂಪತ್ತು ವಿಭಾಗದಲ್ಲಿ ಸಂಸ್ಕಾರ ಶಾಲೆಯ ಅಭಿನವ ಹುರಳಿಕೊಪ್ಪಿ ಪ್ರಥಮ, ವಿಭಾ ಭಟ್ ದ್ವಿತೀಯ, ನಾಯಕತ್ವ ವಿಭಾಗದಲ್ಲಿ ಡಾ. ಜಿ.ವಿ.ಜೋಶಿ ಆಂಗ್ಲ ಮಾಧ್ಯಮ ಶಾಲೆಯ ಖುಷಿ ಗಂದೋಳ್ಕರ್ ಪ್ರಥಮ, ಸಂಸ್ಕಾರ ಸಿಬಿಎಸ್​ಇ ಶಾಲೆಯ ಶಶಾಂಕ ಹಬೀಬ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.

ಅಗ್ನಿರಹಿತ ಆಹಾರ ತಯಾರಿಕೆಯಲ್ಲಿ ಎನ್.ಕೆ. ಠಕ್ಕರ ಆಂಗ್ಲ ಮಾಧ್ಯಮ ಶಾಲೆಯ ಅಪೇಕ್ಷಾ ಕೋಳಿವಾಡ ಮತ್ತು ಶ್ರೀಯಾ ಕೋಟೇಶ್ವರ ಪ್ರಥಮ, ಸಂಸ್ಕಾರ ಸಿಬಿಎಸ್​ಇ ಶಾಲೆಯ ರಿದ್ದಿ ಅಗರವಾಲ ಮತ್ತು ಸನ್ವಿತಾ ದ್ವಿತೀಯ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಎಸ್.ಆರ್. ಬೊಮ್ಮಾಯಿ ರೋಟರಿ ಪಬ್ಲಿಕ್ ಶಾಲೆಯ ಭೂಷಣ ಕೆ., ಅದಿತ್ಯ ಬಿ. ಪ್ರಥಮ, ಪರಿವರ್ತನ ಗುರುಕುಲ ಶಾಲೆಯ ಎಂ. ಸಫಿವಾನ್ ಮತ್ತು ಸಾದ ನೀಲಗುಂದ ದ್ವಿತೀಯ ಸ್ಥಾನ ಪಡೆದುಕೊಂಡರು.

ಸೃಜನಾತ್ಮಕ ಕಲೆ ವಿಭಾಗದಲ್ಲಿ ಸಂಸ್ಕಾರ ಸಿಬಿಎಸ್​ಇ ಶಾಲೆಯ ಅನುಶ್ರೀ ಕೆ. ಹಾಗೂ ಜಾನ್ಹವಿ ಜೆ., ಶಾಂತಿನಿಕೇತನ ಶಾಲೆಯ ಕೃತಿಕಾ ಬದ್ತಿ ಹಾಗೂ ಈಶಾ ಹಾನಗಲ್ ದ್ವಿತೀಯ, ಪರಿಕಲ್ಪನಾ ಗಾನ ವಿಭಾಗದಲ್ಲಿ ಡಾ.ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಅಹಲ್ಯಾ ಬೆಳಗಲಿ, ರೊಟರಿ ಪಬ್ಲಿಕ್ ಶಾಲೆಯ ಸಿಂಚನಾಲಿ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.

ಶಿಕ್ಷಕರಿಗಾಗಿ ಆಯೋಜಿಸಿದ್ದ ಒತ್ತಡ ನಿರ್ವಹಣೆಯಲ್ಲಿ ಸೇಂಟ್ ಹಂಝಾ ಆಂಗ್ಲ ಮಾಧ್ಯಮ ಶಾಲೆಯ ಚಿತ್ರಾ ಜೆ. ಮತ್ತು ಡಾ. ಜಿ.ವಿ. ಜೋಶಿ ರೋಟರಿ ಆಂಗ್ಲ ಮಾದ್ಯಮ ಶಾಲೆಯ ರೇಖಾ ಬಳ್ಳಾರಿ ದ್ವಿತೀಯ ಸ್ಥಾನ ಗಳಿಸಿದರು.

ವೀರಾಗ್ರಣಿ ಪ್ರಶಸ್ತಿಯನ್ನು ಸಂಸ್ಕಾರ ಸಿಬಿಎಸ್​ಇ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಬಾಚಿಕೊಂಡರು.