ಜಿಲ್ಲೆ

ಕಣ್ಮನ ಸೆಳೆದ ವೀರಗಾಸೆ ಮೇಳ

ಅಶೋಕ್ ಕುಮಾರ್ ಎನ್

ಅರಕೇರಾ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಗಳನ್ನು ಸಡಗರ, ಸಂಭ್ರಮದಿಂದ ಬುಧವಾರ ವಿಸರ್ಜನೆ ಮಾಡಲಾಯಿತು.

ಗೌಡಗೇರಿ ಓಣಿ, ಆಂಜನೇಯ ದೇವಸ್ಥಾನ, ಬಡಿಗೇರ್ ಕಟ್ಟೆ, ಸತ್ಯಪ್ಪನ ಕಟ್ಟೆ, ಬಿ.ಆರ್.ಅಂಬೇಡ್ಕರ್ ವೃತ್ತ, ಎಸ್ಸಿ ಕಾಲನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ವಿಸರ್ಜನೆಗೂ ಮುನ್ನ ಭಕ್ತರು, ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿದರು.

ಮೆರವಣಿಗೆಯಲ್ಲಿ ವೀರಗಾಸೆ ಮೇಳ ನೋಡಗರ ಕಣ್ಮನ ಸೆಳೆಯಿತು. ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ವಿವಿಧ ಕಡೆ ಅನ್ನ ಸಂತರ್ಪಣೆ ಕಾರ್ಯ ನಡೆಯಿತು. ಗುಲಾಲ್, ಪಟಾಕಿ ಸಿಡಿಸುವ ಮೂಲಕ ಜೈ ಗಣೇಶ ಎಂಬಿತ್ಯಾದಿ ಘೋಷಗಳನ್ನು ಕೂಗಲಾಯಿತು. ದೇವದುರ್ಗ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.