ದೇವರಹಿಪ್ಪರಗಿ: ವೀರಭದ್ರೇಶ್ವರ ಕಾರ್ತಿಕೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಡಿ.17 ರಂದು ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ, ಮಹಾಪ್ರಸಾದ ಜರುಗಿ ಕಾರ್ತಿಕೋತ್ಸವ ಸಂಪನ್ನಗೊಳ್ಳಲಿದೆ ಎಂದು ಕಾರ್ತಿಕೋತ್ಸವ ಸಮಿತಿ ಅಧ್ಯಕ್ಷ ಸಿ.ಕೆ.ಕುದರಿ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ 12ನೇ ಕಾರ್ತಿಕೋತ್ಸವ ಪ್ರಯುಕ್ತ ಇತ್ತೀಚೆಗೆ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರುಮಾತನಾಡಿದರು.
ಕಾರ್ತಿಕೋತ್ಸವ ಅಂಗವಾಗಿ ಜಂಗಮ ವಟುಗಳಿಗೆ ಅಯ್ಯಚಾರ, ಮುತ್ತೈದೆಯರಿಗೆ ಉಡಿ ತುಂಬುವುದು, ಧರ್ಮಸಭೆ ಸೇರಿ ವಿವಿಧ ಧಾರ್ಮಿಕ ಜರುಗುವವು. ಬಸವನಬಾಗೇವಾಡಿಯ ಶಿವಪ್ರಕಾಶ ಸ್ವಾಮೀಜಿ ಅವರಿಂದ ನ.26 ಪ್ರತಿದಿನ ರಾತ್ರಿ 8 ಗಂಟೆಗೆ ಪುರಾಣ ಆರಂಭಗೊಳ್ಳುವುದು. ಗವಾಯಿ ಶರಣಕುಮಾರ ಯಾಳಗಿ, ತಬಲಾವಾದಕ ನಾಗರಾಜ ಶಹಾಪೂರ ಸಂಗೀತ ಸೇವೆ ನೀಡಲಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ತಾಲ್ಲೂಕು ಜಂಗಮಾಭಿವದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ, ಸಂಗನಗೌಡ ಪಾಟೀಲ, ಆನಂದ ಜಡಿಮಠ, ಮಡಿವಾಳಪ್ಪ ಮಣೂರ, ಸಿದ್ದಯ್ಯ ಮಲ್ಲಿಕಾರ್ಜುನಮಠ, ಅಪ್ಪೋಜಿ ದೇಸಾಯಿ, ಯಲಗೂರೇಶ ದೇವೂರ, ಚನ್ನಯ್ಯ ಮಲ್ಲಿಕಾರ್ಜುನಮಠ, ಈರಣ್ಣ ವಸದ, ರಮೇಶ ಮಶಾನವರ, ದಾನು ಯರನಾಳ, ತೇಜಪ್ಪ ಕಕ್ಕಳಮೇಲಿ, ಸಂಗಮೇಶ ಹಳಿಮನಿ, ಮೌನೇಶ ಬಡಿಗೇರ, ಮುತ್ತು ತೋಟದ, ವೀರೇಶ ಕುದರಿ, ನಿಂಬೆಣಪ್ಪ ಧುತ್ತರಗಾಂವಿ, ಶಿವಪ್ಪ ವಸದ, ರವಿ ಯಾಳಗಿ, ಕುಮಾರಸ್ವಾಮಿ ಹಿರೇಮಠ, ಜೆ.ಆರ್.ಬಿರಾದಾರ ಇದ್ದರು.