ಬಳ್ಳಾರಿ : ತಾಲೂಕಿನ ತೆಕ್ಕಲಕೋಟೆಯ ಕಂಬಾಳಿಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ(69) ಬುಧವಾರ ಲಿಂಗೈಕ್ಯರಾದರು. 1971ರಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಲಿಂಗೈಕ್ಯ ಸಿದ್ದೇಶ್ವರ ಭಗವತ್ಪಾದ ಸ್ವಾಮೀಜಿ ಅವರಿಂದ 16ನೇ ವಯಸ್ಸಿನಲ್ಲಿಯೇ ಶಿವಾಚಾರ್ಯ ದೀಕ್ಷೆ ಹಾಗೂ ಗುರು ಪಟ್ಟಾಧಿಕಾರ ಪಡೆದಿದ್ದರು. ಸ್ವಾಮೀಜಿ ಅಂತಿಮ ಸಂಸ್ಕಾರವನ್ನು ಪಟ್ಟಣದ ಶ್ರೀಸದ್ಧರ್ಮ ಜ್ಞಾನ ಚೇತನ ಆವರಣದ ಹೊಸಮಠದಲ್ಲಿ ಬುಧವಾರ ನೆರವೇರಿದೆ. ಅಂತ್ಯಕ್ರಿಯೆ ಸಂಸ್ಕಾರದಲ್ಲಿ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾನಾ ಪೀಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು