ಗದಗ: ಶ್ರೀ ರಂಭಾಪುರಿ ಪೀಠದ ಲಿಂ. ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶೀ ಪೀಠದ ಲಿಂ. ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ತ್ರಿಕಾಲ ವಂದನೀಯರಾಗಿದ್ದು, ಭಕ್ತರ ಬಾಳಿನ ನಡೆದಾಡುವ ದೇವರಾಗಿದ್ದರು ಎಂದು ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ ಹೇಳಿದರು.
ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಂಘ, ಶ್ರೀ ಜಗದ್ಗುರು ಪಂಚಾಚಾರ್ಯ ವೇದ ಸಂಸ್ಕೃತ ಪಾಠಶಾಲೆ, ಶ್ರೀ ಜಗದ್ಗುರು ವಿಶ್ವಾರಾಧ್ಯ ಜ್ಞಾನಾಮೃತ ಸಮಿತಿ, ಶ್ರೀ ಕಾಶೀ ಪೀಠದ ಮಹಿಳಾ ರುದ್ರ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ಲಿಂ. ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶೀ ಪೀಠದ ಲಿಂ. ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುರೇಶ ಅಬ್ಬಿಗೇರಿ ಮಾತನಾಡಿ, ಶ್ರೀ ಜಗದ್ಗುರುಗಳು ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿ ತಮ್ಮ ಪೂಜಾ ಬಲದಿಂದ ವಾಕ್ ಸಿದ್ಧಿಯಿಂದ ಭಕ್ತರಿಗೆ ಅನುಗ್ರಹ ನೀಡಿದ್ದರು ಎಂದರು.
ವಿ.ಕೆ. ಗುರುಮಠ ಮಾತನಾಡಿ, ಉಭಯ ಜಗದ್ಗುರುಗಳು ಹಾಕಿಕೊಟ್ಟ ಧರ್ಮದ ಮಾರ್ಗವನ್ನು ಸದಾಕಾಲ ಆಚರಿಸುತ್ತಾ ಅದನ್ನು ಅಳವಡಿಸಿಕೊಂಡು ನಡೆದಾಗ ಮಾತ್ರ ಬಾಳು ಸಾರ್ಥಕ ಎಂದು ಹೇಳಿದರು. ಜ್ಞಾನಾಮೃತ ಸಮಿತಿ ಅಧ್ಯಕ್ಷ ಎಲ್.ಪಿ. ಕಂಬಿ, ಪಂಚಾಚಾರ್ಯ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ಹಿರೇಮಠ, ಮಂಗಲಾ ಬೇಲೇರಿ, ಶಾಂತಾ ಹಿರೇಮಠ, ರೇಣುಕಾ ತಂಟ್ರಿ, ಶಶಿಕಲಾ ಲಕ್ಕನಗೌಡ್ರ, ಅನ್ನಪೂರ್ಣಾ ಗಡಾದ, ಎಸ್.ಎಸ್. ಮೇಟಿ, ವೀರಣ್ಣ ಧನ್ನೂರ ಹಿರೇಮಠ, ಚನ್ನಬಸಯ್ಯ ಹೇಮಗಿರಿಮಠ, ವಿ.ಸಿ. ಅಬ್ಬಿಗೇರಿಮಠ, ವಿಜಯಕುಮಾರ ಹಿರೇಮಠ, ಎಂ.ಸಿ. ಐಲಿ, ಅಣ್ಣಯ್ಯ ಗುರುಸ್ವಾಮಿಮಠ ಮತ್ತಿತರರು ಇದ್ದರು. ಗುರುಸಿದ್ದಯ್ಯ ಹಿರೇಮಠ ನಿರೂಪಿಸಿದರು.