ಜಿಲ್ಲೆ

ವೀರಶೈವ ಲಿಂಗಾಯತ ಸಂಘಟನೆಗೆ ಪತ್ರಿ ನೇಮಕ

ರಮೇಶ ಮೇಳಕುಂದಾ

ಹುಮನಾಬಾದ್: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಬೀದರ್ ಜಿಲ್ಲಾಧ್ಯಕ್ಷರಾಗಿ ಪಟ್ಟಣದ ನಿವಾಸಿ ಸುನೀಲ ಪತ್ರಿ ಅವರನ್ನು ಎರಡನೇ ಅವಧಿಗೆ ನೇಮಿಸಿ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ಆದೇಶಿಸಿದ್ದಾರೆ. ವೇದಿಕೆ ತತ್ವ ಸಿದ್ಧಾಂತ, ಶಿಸ್ತು ಪಾಲಿಸಿ ಸಂಘಟನೆಯನ್ನು ಬಲಪಡಿಸಲು ಶ್ರಮಿಸಬೇಕು ಎಂದು ಸೂಚಿಸಿದ್ದಾರೆ.