ಜಿಲ್ಲೆ

ವೀರ ಬಾಲಕರ ತ್ಯಾಗ ಸದಾ ಸ್ಮರಣೀಯ : ಶಾಸಕ ವೇದವ್ಯಾಸ ಕಾಮತ್ ಅಭಿಮತ

Mangaluru - Hariprasad Rai


ಮಂಗಳೂರು : ಸಿಖ್‌ಗುರು ಶ್ರೀ ಗುರು ಗೋವಿಂದ ಸಿಂಗ್ ಅವರ ಮಕ್ಕಳಾದ ಸಾಹಿಬ್ ದಾದಾ ಜೋರಾವರ್ ಸಿಂಗ್ ಮತ್ತು ಸಾಹಿಬ್ ದಾದಾ ಬಾಬಾ ಫತೇರ್ ಸಿಂಗ್ ಅವರು ವೀರ ಮರಣ ಹೊಂದಿದ ದಿನದ ಅಂಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ರಾಷ್ಟ್ರೀಯ ವೀರ ಬಾಲ ದಿನವನ್ನು ನಗರದ ಅಟಲ್ ಸೇವಾ ಕೇಂದ್ರದಲ್ಲಿ ಆಚರಿಸಲಾಯಿತು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಮೊಗಲರ ಅಟ್ಟಹಾಸವನ್ನು ಎದುರಿಸಿ ಮತಾಂತರಕ್ಕೆ ಒಪ್ಪದೇ ಬಲಿದಾನವಾದ ವೀರ ಬಾಲಕರ
ಧೈರ್ಯ ಶೌರ್ಯ ನಮ್ಮೆಲ್ಲರಿಗೂ ಪ್ರೇರಣೆ. ವೀರ ಬಾಲಕರ ತ್ಯಾಗವನ್ನು ಸದಾ ಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯಂತೆ ದೇಶಾದ್ಯಂತ ರಾಷ್ಟ್ರೀಯ ವೀರ ಬಾಲ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಖರ್ವಿಂದರ್ ಸಿಂಗ್ ಅವರು ಮತಾಂತರಕ್ಕೆ ಒಪ್ಪದೇ ದೇಶ ಹಾಗೂ ಧರ್ಮಕ್ಕಾಗಿ ಹೋರಾಡಿ ಅಮರರಾದ ಬಾಲಕರು ಈ ದೇಶದ ಹೆಮ್ಮೆ ಎಂದರು.
ರಮೇಶ್ ಕಂಡೆಟ್ಟು, ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಗುರುಸಿಂಗ್ ಸಭಾ ಗುರುದ್ವಾರದ ಅಧ್ಯಕ್ಷ ಜಿತೇಂದ್ರ ಸಿಂಗ್, ಅಮರ್‌ಜಿತ್ ಸಿಂಗ್, ನಿತಿನ್ ಕುಮಾರ್ ಉಪಸ್ಥಿತರಿದ್ದರು.