ಹೆಬ್ರಿ: ಉಡುಪಿ ಜಿಲ್ಲಾಮಟ್ಟದ ಡಾ.ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ವರಂಗ ವೀಣಾ ಆರ್.ಭಟ್ ಆಯ್ಕೆಯಾಗಿದ್ದಾರೆ. ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಪಂ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ವತಿಯಿಂದ ಮಾ.8ರಂದು ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.