ಹೆಬ್ರಿ: ಭಗವದ್ಗೀತೆ ರಚಿಸಿ ಭಾರತೀಯರಿಗೆ ಸಂಸ್ಕೃತ ಆಧ್ಯಾತ್ಮಿಕ ಚಿಂತನೆ ನೀಡಿ, ವೇದವನ್ನು ನಾಲ್ಕು ಭಾಗವನ್ನಾಗಿ ಮಾಡಿ ನಮ್ಮೆಲ್ಲರಿಗೆ ಭಾರತೀಯ ಸಂಸ್ಕೃತಿ ಕಟ್ಟಿಕೊಟ್ಟಿರುವ ವೇದವ್ಯಾಸರನ್ನು ನೆನಪಿಸಿಕೊಳ್ಳುವ ದಿನ ಗುರು ಪೂರ್ಣಿಮೆ. ಎಲ್ಲ ಗುರುಪರಂಪರೆಗೆ ವೇದವ್ಯಾಸರು ಆದರ್ಶ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಉಡುಪಿ ಜಿಲ್ಲಾ ಕಾಲೇಜು ವಿದ್ಯಾರ್ಥಿ ಪರಿಷತ್ ಪ್ರಮುಖ್ ಅಜಿತ್‌ಕುಮಾರ್ ಕಾರ್ಕಳ ಹೇಳಿದರು.
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಸಭಾಂಗಣದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ, ಸಂಸ್ಥೆ ಮುಖ್ಯಸ್ಥರಾದ ಅಪರ್ಣ ಆಚಾರ್, ಶಕುಂತಳಾ ಉಪಸ್ಥಿತರಿದ್ದರು. ಕೃತಿ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕ ಸ್ವಾಗತಿಸಿದರು. ಆತ್ಮೀಯ ವಂದಿಸಿದರು.