ಜಿಲ್ಲೆ

ಗಣಿತದಲ್ಲಿ ಹಿಡಿತ ಸಾಧಿಸಲು ವೇದಗಣಿತ ಉಪಯುಕ್ತ

ಕುಮಟಾ: ಗಣಿತವನ್ನು ಸರಳವಾಗಿ ಅರ್ಥೈಸಿಕೊಂಡು ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಗಣಿತದಲ್ಲಿ ಸುಲಭವಾಗಿ ಹಿಡಿತ ಸಾಧಿಸುವುದಕ್ಕೆ ವೇದಗಣಿತ ವಿಧಾನ ಅತ್ಯಂತ ಉಪಯುಕ್ತವಾಗಿದೆ. ವೇದ ಗಣಿತದ ಸೂತ್ರಗಳ ಅನ್ವಯಿಸಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಬಹುದು ಎಂದು ವೇದಗಣಿತ ವಿಶೇಷ ಪರಿಣತ ಪೋಂಡಾದ ಸಾಗರ ಸಾಕೋಡೆಕರ್ ಹೇಳಿದರು.

ಪಟ್ಟಣದ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಬಿಎ, ಬಿಎಸ್ಸಿ, ಹಾಗೂ ಬಿಸಿಎ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ವೇದಗಣಿತದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ವೇದ ಗಣಿತಕ್ಕೆ ಸಂಬಂಧಿಸಿದಂತೆ ಸುಲಭ ವಿಧಾನಗಳ ಕುರಿತು ಉದಾಹರಣೆ ಸಹಿತವಾಗಿ ಮಾಹಿತಿ ನೀಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷೆ ಮಂಗಲಾ ನಾಯಕ ಅಧ್ಯಕ್ಷತೆ ವಹಿಸಿ, ವೇದಗಣಿತದ ಉಪಯುಕ್ತತೆ ಕುರಿತು ವಿವರಿಸಿದರು. ಪ್ರಾಚಾರ್ಯ ಡಾ. ಡಾ. ಎನ್.ಕೆ. ನಾಯಕ, ವಿದ್ಯಾರ್ಥಿ ಜೀವನದಲ್ಲಿ ವೇದ ಗಣಿತದ ಮಹತ್ವದ ಕುರಿತು ತಿಳಿಸಿದರು.

ಲಯನ್ ಜಿಲ್ಲಾ ಮಾಜಿ ಗವರ್ನರ್ ಜಿ.ಟಿ. ಕುಚಿನಾಡ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಪೊ›. ವಿದ್ಯಾ ತಲಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ಕಾರ್ಯದರ್ಶಿ ಕೆ.ಎಸ್. ಭಟ್ ವಂದಿಸಿದರು. ಶ್ರೀನಿಧಿ ಸಂಗಡಿಗರು ಕಾರ್ಯಕ್ರಮ ನಿರೂಪಿಸಿದರು.