ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಅಂಗ ಸಂಸ್ಥೆಗಳಾದ ವ್ಹಿ.ಡಿ.ಎಸ್. ಕನ್ನಡ ಪ್ರಾಥಮಿಕ ಹಾಗೂ ವ್ಹಿ.ಡಿ.ಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಗಳ ಸಯುಕ್ತಾಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಆಚರಿಸಲಾಯಿತು. ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಅತಿಥಿ ಮಹನೀಯರಾದ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ.ಎಂ. ವಿ. ಹವಾಲ್ದಾರ್, ಶ್ರೀ ಎಂ. ಆರ್. ಡೊಳ್ಳಿನ ಹಾಗೂ ಆಡಳಿತ ವ್ಯವಸ್ಥಾಪಕರಾದ ಶ್ರೀ ವಾದಿರಾಜ ಕಾತೋಟಿಯವರು ಹೂಮಾಲೆ ಅರ್ಪಿಸಿ, ಪೂಜೆ ಸಲ್ಲಿಸಿದರು.
ಕಾರ್ಯಕ್ರಮದ ಕುರಿತು ಮುಖ್ಯೋಪಾಧ್ಯಾಯರಾದ ಶ್ರೀ ಎಂ. ವ್ಹಿ. ಹವಾಲ್ದಾರ ರವರು ಮಹರ್ಷಿ ವಾಲ್ಮೀಕಿ ಯವರು ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ, ಇಡಿ ನಾಡಿಗೆ ಸೀಮಿತವಾದವರು. ಶ್ರೀ ಮಹರ್ಷಿ ವಾಲ್ಮೀಕಿಯವರ ಕುರಿತು ಗತಿಸಿ ಹೋದ ಘಟನೆಗಳನ್ನು ಸವಿಸ್ತಾರವಾಗಿ ವಿವರಣೆ ನೀಡಿದರು. ಅವರ ಮಹಾಕಾವ್ಯಗಳು ಇಡಿ ಭೂಮಂಡಲಕ್ಕೆ ಆದರ್ಶ ಪ್ರಾಯವಾಗಿದ್ದು, ಅಂತಹ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಜಯಂತಿಯ ಆಚರಣೆಗೆ ಒಂದು ಅರ್ಥ ಬಂದಂತೆ ಆಗುತ್ತದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯೋಪಾಧ್ಯಾಯರಾದ ಶ್ರೀ. ಎಂ. ಆರ್. ಡೊಳ್ಳಿನ ರವರು ನಮ್ಮ ಭಾರತ ದೇಶದಲ್ಲಿ ಅನೇಕ ಋಷಿಮುನಿಗಳು, ಪಂಡಿತರು ಹಾಗೂ ವಿದ್ವಾಂಸರು ಬದುಕಿ ಬಾಳಿ ಹೋಗಿದ್ದಾರೆ. ಆದರೆ ಆದಿ ಕವಿ ಶ್ರೀ ವಾಲ್ಮೀಕಿ ಮಹರ್ಷಿಗಳರವರನ್ನು ಮಾತ್ರ ಮಹಾಕವಿ ಎಂಬುದಾಗಿ ಸವಿಸ್ತಾರವಾಗಿ ತಮ್ಮ ಅನಿಸಿಕೆಯ ಮೂಲಕ ವಿಶ್ಲೇಷಿಸಿದರು. ಆಡಳಿತ ವ್ಯವಸ್ಥಾಪಕರಾದ ಶ್ರೀ. ವಾದಿರಾಜ ಕಾತೋಟಿಯವರು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಎಲ್ಲರಿಗೂ ಶುಭ ಕೋರಿದರು.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಶಾಲೆಯ ಸಹಶಿಕ್ಷಕಿಯರಾದ ಶ್ರೀಮತಿ ಎಂ. ಎನ್. ಹುಬ್ಬಳ್ಳಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಆರ್. ಡಿ. ಪಡೆಸೂರರವರು ಸ್ವಾಗತಿಸಿದರು. ಹಾಗೂ ಶ್ರೀಮತಿ ಕಾವೇರಿ ಲಮಾಣಿ ಅವರು ವಂದಿಸಿದರು. ಶ್ರೀ ಮಹೇಶ್ ಬ್ಯಾಳಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿಮಹನೀಯರು, ಶಿಕ್ಷಕ/ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.