ಪುತ್ತೂರು: ಬೆಳಗಾವಿಯ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಅಗತ್ಯ ಡಿ., ಎನ್.ಆರ್.ವಿವೇಕ್ ಸುಬ್ಬಯ್ಯ, ಅಕ್ಷಣ್ ಎಚ್.ಎಂ., ನಿಶಾಂತ್ ಕೆ., ಉಲ್ಲಾಸ್ ಡಿ.ಜಿ., ಮಾನಸ್ ಎಸ್.ಡಿ., ಎಚ್.ಎ.ಚಿನ್ಮಯ್, ದರ್ಶನ್ ಎಚ್.ಕೆ., ಚಿರಾಗ್ ಹಾಗೂ ಪ್ರಥಮ ಪಿಯುಸಿಯ ಉಜ್ವಲ್ ಮನೋಜ್ ತಾರ, ನಿಹಾನ್ ಶೆಟ್ಟಿ ವಿ.ಆರ್., ಯೋಗೇಶ್ ಎನ್., ಪ್ರಣವ್ ವಿ.ವಿ., ಗಗನ್ ಸಿ.ಎನ್., ವಿ.ಜಿ.ವಿಲಾಸ್ ಭಾಗವಹಿಸಿದ್ದರು. ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್‌ವಿ.ಎಸ್., ಡಾ.ಜ್ಯೋತಿ ಕುಮಾರಿ ಮತ್ತು ಯತೀಶ್ ನೇತೃತ್ವದಲ್ಲಿ ತರಬೇತಿ ಪಡೆದಿದ್ದಾರೆ.