ಜಿಲ್ಲೆ

ಯೋಗ, ಧ್ಯಾನದಿಂದ ದೈವತ್ವ- ಉಪನ್ಯಾಸಕ ಡಾ.ಸುಧೀರ್ ಕೆ.ವಿ ಹೇಳಿಕೆ

Mangaluru - Nishantha Narayana


ಪುತ್ತೂರು: ಪಾಶ್ಚಿಮಾತ್ಯ ಸಂಪ್ರದಾಯಕ್ಕೆ ಹೋಲಿಸಿದರೆ ಭಾರತೀಯ ಮನಃಶ್ಶಾಸದಲ್ಲಿ ಬಹಳ ವ್ಯತ್ಯಾಸವಿದೆ. ಮನುಷ್ಯ ಯೋಗ ಮತ್ತು ಧ್ಯಾನವನ್ನು ಅಭ್ಯಸಿಸುವ ಮೂಲಕ ದೈವತ್ವವನ್ನು ಸಾಽಸುತ್ತಾನೆ. ಮನುಷ್ಯನ ಮಿದುಳಿನ ಸ್ಥಿತಿಗತಿ ಆತ ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಪನ್ಯಾಸಕ ಡಾ.ಸುಧೀರ್ ಕೆ.ವಿ ಹೇಳಿದರು.

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಮತ್ತು ಐ.ಕ್ಯೂ.ಎ.ಸಿ ಹಾಗೂ ವಿಜ್ಞಾನ ಘಟಕದ ಸಹಯೋಗದಲ್ಲಿ ಮನೋವಿಜ್ಞಾನ ವಿಭಾಗದ ವಾರ್ಷಿಕ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್, ಮನೋವಿಜ್ಞಾನ ವಿಭಾಗದ ಉಪನ್ಯಾಸಕಿ ಅನುಷಾ, ವಿಜ್ಞಾನ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಕೆ. ಎಸ್. ಉಪಸ್ಥಿತರಿದ್ದರು.


ಪ್ರಥಮ ವರ್ಷದ ವಿದ್ಯಾರ್ಥಿನಿ ವಾಣಿಶ್ರೀ ಸ್ವಾಗತಿಸಿದರು. ದ್ವಿತೀಯ ವರ್ಷದ ವಿದ್ಯಾರ್ಥಿನಿ ಬೆಟ್ಟಿಜಾನ್ ವಂದಿಸಿದರು. ದ್ವಿತೀಯ ವರ್ಷದ ತೇಜಸ್ವಿನಿ ಹಾಗೂ ಜೀವಿತಾ ಕಾರ್ಯಕ್ರಮ ನಿರ್ವಹಿಸಿದರು.