ಜಿಲ್ಲೆ

ಕೊಡಗು ವಿವಿ ಕುಲಪತಿಗೆ ಪ್ರಶಸ್ತಿ

ಸುನಿಲ್ ಪೊನ್ನೇಟಿ

ಮಡಿಕೇರಿ

ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ನವದೆಹಲಿಯ ಇಂಡಿಯಾ ಹ್ಯಾಬಿಟೆಟ್ ಸೆಂಟರ್‌ನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಚಾರ್ಲ್ಸ್ ವಾಲ್ಟರ್ ಕೌನ್ಸಿಲ್ ಫಾರ್ ಇನೋವೇಶನ್ ಅಂಡ್ ರೀಸರ್ಚ್ ಮತ್ತು ಅಸೋಸಿಯೇಷನ್ ಆಫ್ ಇಂಡಿಯನ್ ಬ್ಯೂರೋಕ್ಯಾಟ್ ಸಂಯೋಗದೊAದಿಗೆ ಪ್ರತಿಷ್ಠಿತ ಆನರ್ ಆಫ್ ಅಶೋಕ ಪ್ರಶಸ್ತಿ 2025 ನೀಡಿ ಗೌರವಿಸಲಾಯಿತು.

ನ್ಯಾಯಾಂಗ, ಪೊಲೀಸ್, ಸಾರ್ವಜನಿಕ-ಶೈಕ್ಷಣಿಕ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಶ್ಲಾಘನೀಯ ಶ್ರೇಷ್ಠತೆಯನ್ನು ಪ್ರದರ್ಶಿಸಿದ ನೈಪುಣ್ಯ ಅಧಿಕಾರಿಗಳು, ಸೈನಿಕರು, ಆಡಳಿತಗಾರರು ಮತ್ತು ಶಿಕ್ಷಣ ತಜ್ಞರಿಗೆ ಮೀಸಲಾಗಿರುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು ನ್ಯಾಯಯುತ ಆಡಳಿತ, ಆಡಳಿತದ ತೇಜಸ್ಸು ಮತ್ತು ರಾಷ್ಟ್ರದ ಬಗೆಗಿನ ಅಚಲ ಬದ್ಧತೆಗಾಗಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ಈ ಪ್ರಶಸ್ತಿ ಬಂದಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಜೇಂದರ್ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಕೊಡಗು ವಿವಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.