ಜಿಲ್ಲೆ

ವಯೋಶ್ರೀ ಯೋಜನಾ ಸ್ಕ್ರೀನಿಂಗ್ ಶಿಬಿರ

ಸೌಮ್ಯ ಆರ್

ಕಾಸರಗೋಡು: ಹಿರಿಯ ನಾಗರಿಕರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಕೇರಳದಲ್ಲಿ ಕಾರ್ಯಗತಗೊಳಿಸದೇ ರಾಜ್ಯದ ಎಡರಂಗ ಸರ್ಕಾರ ವಯೋವೃದ್ಧ ನಾಗರಿಕರನ್ನು ಕಡೆಗಣಿಸಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ತಿಳಿಸಿದ್ದಾರೆ.

ವಿಕಸಿತ ಕೇರಳ ಯೋಜನೆ ಅಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಹೆಲ್ಪ್ ಡೆಸ್ಕ್ ಮೇಲ್ನೋಟದಲ್ಲಿ ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಸಹಕಾರದೊಂದಿಗೆ ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ವಯೋಶ್ರೀ ಯೋಜನಾ ಸ್ಕ್ರೀನಿಂಗ್ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್, ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಎನ್.ಬಾಬುರಾಜ್ ಮೊದಲಾದವರಿದ್ದರು.

ಆರ್ಟೀಫಿಷಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿರುವ ಕೋಯಿಕ್ಕೋಡ್ ಕೇಂದ್ರದ ಮುಖ್ಯಸ್ಥ ದಿವ್ಯಶ್ರೀ, ಅಜಿತ್ ಕುಮಾರ್, ಬದಿಯಡ್ಕ ಮಾರ್ತೋಮ ಕಾಲೇಜ್ ಆಫ್ ಸ್ಪೆಷಲ್ ಎಜ್ಯುಕೇಶನ್ ಸೆಂಟರಿನ ಆಡಿಯೋಲಜಿಸ್ಟ್ ಫೆಬಿನ್ ಬಾಬು ತಪಾಸಣೆಗೆ ನೇತೃತ್ವ ನೀಡಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗೋಪಾಲನ್, ಮಹೇಶ್ ಗೋಪಾಲ್, ಪ್ರಮೀಳಾ ಮಜಲ್, ಕೆ.ಎಂ.ಅಶ್ವಿನಿ, ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿಬು ಪಾಣತ್ತೂರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕೆ.ಎಸ್.ರಮಣಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಅಶ್ವಿನ್ ಮೊದಲಾದವರಿದ್ದರು.