ಕೊಪ್ಪಳ ತಾಲೂಕಿನ ಕಿಡದಾಳ ಗ್ರಾಮದ ಶಾರದಾ ಶಾಲೆಯಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕಾರ್ಯಕಾರಿಣಿ ನಿರ್ದೇಶಕ ಎಂ.ಶಿವ ಪ್ರಕಾಶ, ಕಾರ್ಯನಿರ್ವಹಣಾ ನಿರ್ದೇಶಕ ಡಾ.ವಿಶ್ವನಾಥ ರೆಡ್ಡಿ, ಪಿಯು ಕಾಲೇಜಿನ ಪ್ರಾಚಾರ್ಯ ನಾಗೇಶ ಬಾಬು, ಕಿರಣ್ ಕುಮಾರ್, ಶಿಕ್ಷಕಿ ಚಂದ್ರಕಲಾ ಇದ್ದರು.  
ಜಿಲ್ಲೆ

ವಾಲ್ಮೀಕಿ ಜಯಂತಿ ಆಚರಣೆ

ಕೊಪ್ಪಳ: ತಾಲೂಕಿನ ಕಿಡದಾಳ ಶಾರದ ಇಂಟರ್ನ್ಯಾಷನಲ್ ಶಾಲೆ ಹಾಗೂ ಶಾರದಾ ಪಿಯು ಕಾಲೇಜು ಸಂಯುಕ್ತಾಶ್ರಯದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ಶಾಲೆಯ ಕಾರ್ಯಕಾರಿಣಿ ನಿರ್ದೇಶಕ ಎಂ.ಶಿವ ಪ್ರಕಾಶ, ಕಾರ್ಯನಿರ್ವಹಣಾ ನಿರ್ದೇಶಕ ಡಾ.ವಿಶ್ವನಾಥ ರೆಡ್ಡಿ, ಪಿಯು ಕಾಲೇಜಿನ ಪ್ರಾಚಾರ್ಯ ನಾಗೇಶ ಬಾಬು, ಕಿರಣ್ ಕುಮಾರ್, ಶಾಲೆಯ ಉಸ್ತುವಾರಿ ನಿರ್ವಾಹಕ ಲಿಂಗಾನಂದ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.

ಪ್ರಾಚಾರ್ಯ ಡಾ.ಪಿಆರ್‌ಎಸ್ ಚಕ್ರವರ್ತಿ ಮಾತನಾಡಿ, ವಾಲ್ಮೀಕಿ ಮಹರ್ಷಿ ಏಳು ಸಾವಿರ ವರ್ಷಗಳ ಹಿಂದೆಯೇ ರಾಮಾಯಣ ಎಂಬ ಮಹೋನ್ನತ ಗ್ರಂಥ ರಚಿಸಿದ್ದಾರೆ. ಇದು ನೂರಾರು ಕವಿಗಳಿಗೆ ಪ್ರೇರಣೆಯಾಗಿದೆ.

ಆ ಮಹಾನ್ ಚೇತನ ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ. ಅವರೊಬ್ಬ ಸಾಂಸ್ಕೃತಿಕ ವ್ಯಕ್ತಿ ಎಂದರು. ಕನ್ನಡ ಶಿಕ್ಷಕಿ ಚಂದ್ರಕಲಾ ಮಹರ್ಷಿ ವಾಲ್ಮೀಕಿ ಬಗ್ಗೆ ಮಾಹಿತಿ ನೀಡಿದರು. ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.

ಶಾರದಾ ಇಂಟರ್ನಾಷನಲ್ ಶಾಲೆ, ಚಿಣ್ಣರ ಲೋಕ ಹಾಗೂ ಪಿಯು ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.