ಮಂಗಳೂರು : ಮೂಡುಬಿದಿರೆ ಮೂಲದ ಹಿರಿಯ ಭರತನಾಟ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಅವರ 75ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ನ.15 ರಿಂದ 24ರವರೆಗೆ ಮೈಸೂರಿನ ವಸುಂಧರ ಭವನದಲ್ಲಿ ‘ವಸುಂದರೋತ್ಸವ’ ಕಾರ್ಯಕ್ರಮ ನಡೆಯಲಿದೆ ಎಂದು ಭರತನಾಟ್ಯ ಗುರು ಡಾ.ಭ್ರಮರಿ ಶಿವಪ್ರಕಾಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಾರ್ಯಕ್ರಮವನ್ನು ಡಾ.ಎಚ್.ಎಸ್. ಬಲ್ಲಾಳ್ ಅವರು ಉದ್ಘಾಟಿಸಲಿದ್ದಾರೆ. ನ.24ರಂದು ಮೈಸೂರು ಕಲಾದಿವಸ್ ಆಚರಣೆ ನಡೆಯಲಿದ್ದು, 750 ನೃತ್ಯ ಕಲಾವಿದರು ವೇದಿಕೆಯಲ್ಲಿ ಭರತನಾಟ್ಯ ಪ್ರದರ್ಶಿಸಲಿದ್ದಾರೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ. ಭಾರತದ ವಿವಿಧ ರಾಜ್ಯಗಳು ಸೇರಿದಂತೆ ಇಂಗ್ಲೆಂಡ್, ಅಮೆರಿಕ, ಜರ್ಮನಿ, ದುಬೈ ಸಹಿತ ವಿವಿಧ ದೇಶಗಳಿಂದದ ಶಿಷ್ಯಂದಿರು ಆಗಮಿಸಲಿದ್ದಾರೆ. ಡಾ.ವಸುಂಧರಾ ದೊರೆಸ್ವಾಮಿ ಅವರ ಮೂರು ನೃತ್ಯಬಂಧಗಳ ಪ್ರಸ್ತುತಿ ನಡೆಯಲಿದೆ. ಕೃಷ್ಣ ಮಾಧುರ್ಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು. ಅಂಜಲಿ, ಶುಕೀ ರಾವ್, ಮಹಾಲಕ್ಷ್ಮಿ ಉಪಸ್ಥಿತರಿದ್ದರು.