Vasavi Jayanti celebration in splendor  
ಜಿಲ್ಲೆ

ವಾಸವಿ ಜಯಂತಿ ವೈಭವದ ಆಚರಣೆ

Vijayapura - Desk - Doddanagouda Gudihindin

ಇಳಕಲ್ಲ (ಗ್ರಾ) : ಸ್ಥಳೀಯ ಆರ್ಯವೈಶ್ಯ ಸಮಾಜದ ವತಿಯಿಂದ ಕುಲದೇವತೆ ಕನ್ನಿಕಾ ಪರಮೇಶ್ವರಿ ದೇವಿಯ ವಾಸವಿ ಜಯಂತಿ ಅಂಗವಾಗಿ ಬುಧವಾರ ಆಯೋಜಿಸಿದ್ದ ಕುಂಭ ಮೆರವಣಿಗೆ ನೋಡುಗರ ಗಮನ ಸೆಳೆಯಿತು.

ಬಜಾರ್ ವೆಂಕಟೇಶ ದೇವಸ್ಥಾನದಿಂದ ಆರಂಭವಾದ ಕುಂಭ ಮತ್ತು ಪಲ್ಲಕ್ಕಿ ಮೆರವಣಿಗೆ ಗಾಂಧಿ ಚೌಕ , ಗ್ರಾಮ ಚಾವಡಿ, ದ್ವಾರಕಾ ಲಾಡ್ಜ್ ಮಾರ್ಗವಾಗಿ ಶಂಕರಿಲಿಂಗ ದೇವಸ್ಥಾನಕ್ಕೆ ಆಗಮಿಸಿತು. ಅಲ್ಲಿ ಸಮಾಜದ ಮಹಿಳೆಯರು ತೊಟ್ಟಿಲು ಸೇವೆ ಮಾಡಿದ ನಂತರ ಅರ್ಚಕರು ಮಹಾಪೂಜೆ ನೆರವೇರಿಸಿದರು.

ಕಾರ್ಯಕ್ರಮಕ್ಕೆ ವೀರಶೈವ ಲಿಂಗಾಯತ ಅಭಿವದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಕನ್ನಿಕಾ ಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು ಮುಂದಿನ ವರ್ಷದೊಳಗಾಗಿ ವಾಸವಿ ಮಂದಿರ ಮತ್ತು ಸಮುದಾಯ ಭವನ ಕಟ್ಟಿಸಿಕೊಡುವುದಾಗಿ ತಿಳಿಸಿದರು.

ಸಮಾಜದ ವತಿಯಿಂದ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಗಳ ನೇತೃತ್ವವನ್ನು ಅಧ್ಯಕ್ಷ ರತ್ನಕುಮಾರ ಕನಶೆಟ್ಟಿ ಉಪಾಧ್ಯಕ್ಷ ಶ್ರೀನಿವಾಸ ಬೆಂಗಳೂರು, ಹಿರಿಯರಾದ ಸತ್ಯನಾರಾಯಣ ಅರಳಹಳ್ಳಿ , ಮುತ್ತುರಾಜ ಬೆಂಗಳೂರು, ಸೋಮನಾಥ ಕೋರಾ, ಕಮಲಹಾಸನ ಮತ್ತು ವಾಸವಿ ಮಹಿಳಾ ಮಂಡಳದ ಪದಾಧಿಕಾರಿಗಳು ವಹಿಸಿದ್ದರು.