ದಿಲೀಪ್ ಸೀರ್ವಿ 
ಜಿಲ್ಲೆ

ವಾಸವಿ ಪ್ರಥಮ ದರ್ಜೆ ಕಾಲೇಜು ಸಾಧನೆ

ಅಭಿನಯ್ ಎಚ್.ಎಂ

ಕೊಳ್ಳೇಗಾಲ: ಪಟ್ಟಣದ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜು ಬಿ.ಕಾಂ ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ.95% ಫಲಿತಾಂಶ ಪಡೆದಿದೆ.

ಪರೀಕ್ಷೆ ತೆಗೆದುಕೊಂಡಿದ್ದ 86 ವಿದ್ಯಾರ್ಥಿಗಳಲ್ಲಿ 82 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 64 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ. ದಿಲೀಪ್ ಸೀರ್ವಿ 600 ಕ್ಕೆ 596 ಅಂಕ ಪಡೆಯುವುದರ ಜತೆಗೆ 4 ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪಿ.ರಾಧಿಕಾ 600ಕ್ಕೆ 586 ಅಂಕ ಪಡೆದು 2 ವಿಷಯಗಳಲ್ಲಿ 100 ಕ್ಕೆ 100 ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಕೆ.ವಿ.ಪ್ರಾರ್ಥನಾ 600 ಕ್ಕೆ 579 ಅಂಕ ಪಡೆದು 2 ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.

ಐಡಿಟಿ-2ವಿಷಯದಲ್ಲಿ 14 ವಿದ್ಯಾರ್ಥಿಗಳು, ಎಸಿಎಂಎ-2 ವಿಷಯದಲ್ಲಿ 10 ವಿದ್ಯಾರ್ಥಿಗಳು, ಸಿಟಿಪಿ ವಿಷಯದಲ್ಲಿ 8 ವಿದ್ಯಾರ್ಥಿಗಳು, ಪಿಪಿಎ ವಿಷಯದಲ್ಲಿ 2 ವಿದ್ಯಾರ್ಥಿಗಳು ಹಾಗೂ ಬಿಎಲ್ ವಿಷಯದಲ್ಲಿ 1 ವಿದ್ಯಾರ್ಥಿ 100ಕ್ಕೆ 100 ಅಂಕ ಗಳಿಸಿಸಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳನ್ನು ವಾಸವಿ ವಿದ್ಯಾಕೇಂದ್ರದ ಅಧ್ಯಕ್ಷ ಎ.ಡಿ.ಕುಮಾರ ಕೃಷ್ಣ, ಕಾರ್ಯದರ್ಶಿ ಡಾ.ಪಿ.ಜಿ.ಶ್ರೀಧರ್, ಸಹ ಾರ್ಯದರ್ಶಿ ನಾಗರಾಜು ಬಾಬು, ಖಜಾಂಚಿ ಸುಮಂತ್ ಅಚ್ಚಮ್ ಅಭಿನಂದಿಸಿದ್ದಾರೆ.