ಜಿಲ್ಲೆ

ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ

ಎ. ಆರ್. ರಘುರಾಮ

ಹೊಳೆನರಸೀಪುರ : ವ್ಯಕ್ತಿತ್ವ ವಿಕಸನ ತರಬೇತಿಗಳ ಮೂಲಕ ಸಮಾಜಕ್ಕೆ ಉತ್ತಮ ಯುವ ನಾಯಕರನ್ನು ನೀಡುವ ಕೆಲಸ ಬಹು ಮುಖ್ಯ ಎಂದು ವಾಸವಿ ಇಂಟರ್‌ನ್ಯಾಷನಲ್ ಕ್ಲಬ್‌ನ ಪ್ರಾಂತಪಾಲ ರಾಮಗೋಪಾಲ್ ನುಡಿದರು. ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಪಟ್ಟಣದ ವಾಸವಿ ಕ್ಲಬ್ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಸೇವಾ ಮನೋಭಾವ ರೂಢಿಸಿಕೊಂಡರೆ ಸಮಾಜ ಅಭಿವೃದ್ಧಿಪಥದಲ್ಲಿ ಸಾಗುತ್ತದೆ. ಈ ನಿಟ್ಟಿನಲ್ಲಿ ಕ್ಲಬ್‌ನ ಸದಸ್ಯರು ಜಾಗೃತರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಕ್ಲಬ್‌ನ ಅಂತಾರಾಷ್ಟ್ರೀಯ ಸಹ ಕಾರ್ಯದರ್ಶಿ ಕೃಷ್ಣಯ್ಯ ಮಾತನಾಡಿ, ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ಇತ್ಯಾದಿ ಸೇವಾ ಚಟುವಟಿಕೆ ನಡೆಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷ ರೋಹಿತ್ ಮತ್ತು ಕಾರ್ಯದರ್ಶಿ ಹೇಮಾನಾಗೇಂದ್ರ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಅಧ್ಯಕ್ಷ ರೋಹಿತ್, ಪದಾಧಿಕಾರಿಗಳಾದ ಪಿ. ಆನಂದ್ ಕುಮಾರ್, ಭಾಸ್ಕರ ಶೆಟ್ಟಿ, ರಾಮಕೃಷ್ಣಗುಪ್ತ, ಅವಿನಾಶ್, ಗೋಕುಲ್, ರವಿಕೀರ್ತಿ, ಕಾರ್ತಿಕ್ ಹಾಜರಿದ್ದರು.