ಜಿಲ್ಲೆ

ಮೈಸೂರಿನಲ್ಲಿ 14 ರಿಂದ ವಸಂತ ವಿಹಾರ ಬೇಸಿಗೆ ಶಿಬಿರ

ಆರ್.ಕೃಷ್ಣ

ಮೈಸೂರು: ಯಾದವಗಿರಿಯಲ್ಲಿರುವ ಶ್ರೀರಾಮಕೃಷ್ಣ ಆಶ್ರಮದಲ್ಲಿ ಏ.14ರಿಂದ 20ರವರೆಗೆ ಪ್ರೌಢಶಾಲಾ ಹಂತದ ಮಕ್ಕಳಿಗೆ ವಸಂತ ವಿಹಾರ- ಬೇಸಿಗೆ ಶಿಬಿರ ಆಯೋಜಿಸಲಾಗಿದೆ.

ನಿತ್ಯ ಬೆಳಗ್ಗೆ 7.45ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ವ್ಯಕ್ತಿತ್ವ ನಿರ್ಮಾಣ, ಯೋಗ, ಧ್ಯಾನ, ಚಿತ್ರಕಲೆ, ಸಂವಹನ ಕೌಶಲ, ಸೃಜನಾತ್ಮಕ ಕಲಿಕೆ ಮತ್ತು ದಿವ್ಯತ್ರಯರಾದ ಶ್ರೀ ರಾಮಕೃಷ್ಣ ಪರಮಹಂಸ, ಶಾರದಾಮಾತೆ ಮತ್ತು ಸ್ವಾಮಿ ವಿವೇಕಾನಂದರ ಸಂದೇಶ ಇತ್ಯಾದಿ ವಿಷಯಗಳ ಬಗ್ಗೆ ವಿಷಯ ತಜ್ಞರು ಸಮಗ್ರ ತರಬೇತಿ ನೀಡಲಿದ್ದಾರೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಬಹುದು. ವಿವರ ಮತ್ತು ಹೆಸರು ನೋಂದಣಿಗೆ 0821- 2417444 ಅಥವಾ 2412424 ಸಂಪರ್ಕಿಸಬಹುದು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.