ಜಿಲ್ಲೆ

ಜಿಲ್ಲೆಯಾದ್ಯಂತ ಅಬ್ಬರಿಸಿದ ವರುಣರಾಯ

ಎನ್.ವೆಂಕಟೇಶ್

 ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಎರಡು ದಿನಗಳಿಂದಲೂ ಉತ್ತಮ ಮಳೆಯಾಗುತ್ತಿರುವ ನಡುವೆ ಹಲವೆಡೆ ನಾನಾ ಸಮಸ್ಯೆ ಸೃಷ್ಟಿಯಾಗಿವೆ.

ಧಾರಾಕಾರ ಮಳೆ ಸುರಿಯುವ ಹವಾಮಾನ ಇಲಾಖೆಯ ವರದಿ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ೋಷಿಸಲಾಗಿದೆ. ಅದರಂತೆ ಮೂರ್ನಾಲ್ಕು ದಿನಗಳಿಂದಲೂ ಮಳೆಯಾಗುತ್ತಿದೆ. ಇದರ ನಡುವೆ ಸ್ಥಳೀಯ ಆಡಳಿತ ಸಂಸ್ಥೆಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಅವೈಜ್ಞಾನಿಕ ಕೆಲಸಕ್ಕೆ ಜನರು ತೊಂದರೆ ಅನುಭವಿಸುವಂತಾಗಿದೆ.

ಕೇಳ ಸೇತುವೆ ಜಲಾವೃತ

ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಮಾರ್ಗದ ನಂದಿಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಸೇತುವೆಯ ಕೆಳಗಿನ ಪ್ರದೇಶವು ಜಲಾವೃತಗೊಂಡಿದ್ದು, ಕೋಲಾರ, ನಂದಿ, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಕಡೆ ಸಾಗಲು ವಾಹನ ಸವಾರರು ಪರದಾಡಿದರು. ಇನ್ನು ಅಪಾರ ನೀರು ತೋಟಗಳಿಗೆ ಹರಿದದ್ದು ರೈತರ ಆತಂಕಕ್ಕೆ ಕಾರಣವಾಯಿತು. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುವ ಸಂದರ್ಭದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಅಸಡ್ಡೆ ಪ್ರದರ್ಶಿಸಿದ್ದಾರೆ. ಸರ್ವೀಸ್ ರಸ್ತೆ, ಚರಂಡಿ ಸಮರ್ಪಕವಾಗಿಲ್ಲ. ಏರು ತಗ್ಗು ಪ್ರದೇಶಗಳಿವೆ. ಇದರ ನಡುವೆ ಸಣ್ಣ ಮಳೆಗೂ ಇಳಿಜಾರಿನಲ್ಲಿ ನೀರು ಒಂದೆಡೆಗೆ ಹರಿಯುತ್ತಿದ್ದು, ಇದರಿಂದ ಹಲವೆಡೆ ಜಲಾವೃತವಾಗಿ ತೊಂದರೆ ಅನುಭವಿಸುವಂತಾಗಿದೆ. ಇದರ ಬಗ್ಗೆ ಸ್ಥಳೀಯರು ಹಲವು ಬಾರಿ ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಪ್ರತಿ ಬಾರಿ ಮಳೆ ಬಂದಾಗ ಈ ಮಾರ್ಗದಲ್ಲಿ ವಾಹನ ಸವಾರರು ಮತ್ತು ಅಂಗಡಿ ಮಾಲೀಕರು ನೀರನ್ನು ಖಾಲಿ ಮಾಡಲು ಪದೇಪದೆ ಕಸರತ್ತು ನಡೆಸಬೇಕಾಗಿದೆ. ಇದರ ಜತೆಗೆ ಈ ಭಾಗದ ಅಂಗಡಿ, ಹೋಟೆಲ್, ಹಾಲು ಮಾರಾಟ ಕೇಂದ್ರಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

ಬಿತ್ತನೆಗೆ ಅನುಕೂಲ

ಜುಲೈನಲ್ಲಿ ವಾಡಿಕೆ ಮಳೆಗಿಂತಲೂ ಕಡಿಮೆ ಮಳೆ ದಾಖಲಾಗಿತ್ತು. ಇದರಿಂದ ಬಿತ್ತನೆ ಚಟುವಟಿಕೆಯಲ್ಲೂ ಹಿನ್ನಡೆ ಕಂಡು ಬಂದಿತ್ತು. ಆಗಸ್ಟ್‌ನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಕೃಷಿ ಕಾರ್ಯಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆ ಹೆಚ್ಚಿಸಿದೆ.

ತೋಟಗಾರಿಕೆ ಬೆಳೆಗೆ ತೊಂದರೆ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಉತ್ತಮ ದರ ಸಿಗುತ್ತಿದೆ. ಈಗ ನಿರಂತರ ಮಳೆ ಮತ್ತು ಮೋಡ ಮುಸುಕಿದ ವಾತಾವರಣದ ಹಿನ್ನೆಲೆಯಲ್ಲಿ ನಾನಾ ರೋಗ, ಸಮಸ್ಯೆಗಳಿಗೆ ಬೆಳೆಗಳು ತುತ್ತಾಗುವ ಆತಂಕ ಕಾಡುತ್ತಿದ್ದು, ಗುಣಮಟ್ಟದಲ್ಲೂ ಏರುಪೇರು ಕಂಡು ಬರುತ್ತಿದೆ. ಇದಕ್ಕೆ ಹೆಚ್ಚಿನ ಔಷಧಗಳ ಬಳಕೆಯು ಅನಿವಾರ್ಯವಾಗಿದೆ.

ಗೌರಿಬಿದನೂರು ರಸ್ತೆಯಲ್ಲಿ ಸೇತುವೆ ಕುಸಿತ

ಗೌರಿಬಿದನೂರು: ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ರಸ್ತೆಯಲ್ಲಿ ಸೇತುವೆ ಕುಸಿದು ಬಿದ್ದಿದ್ದು, ಜಿಲ್ಲಾ ಕೇಂದ್ರದೊಂದಿಗಿನ ಸಂಪರ್ಕ ಸ್ಥಗಿತಗೊಂಡಿದೆ.

ಎನ್.ಎಚ್.69ರ ಗಿಡಗಾನಹಳ್ಳಿ-ಪುರ ನಡುವಿನ ಹಳೆಯ ಸೇತುವೆ ತೆರವುಗೊಳಿಸಿ, ನೂತನ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆಂದು ತಾತ್ಕಾಲಿಕ ಸೇತುವೆ ನಿರ್ಮಿಸಿದ್ದು, ಅದು ಈಗ ಮಳೆಯ ನೀರಿಗೆ ಸಂಪೂರ್ಣ ಕೊಚ್ಚಿ ಹೋಗಿದೆ.

ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ಕಡೆಗೆ ಹೋಗುವ ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು, ದ್ವಿಚಕ್ರ ವಾಹನ ಸವಾರರು ಭಕ್ತರಹಳ್ಳಿ-ಗಿಡಗಾನಹಳ್ಳಿ ಮಾರ್ಗವನ್ನು ಬಳಸಿಕೊಂಡು ಸಾಗುತ್ತಿವೆ. ಬೃಹತ್ ವಾಹನಗಳು ತೊಂಡೇಬಾವಿ-ಮಂಚೇನಹಳ್ಳಿ ಮಾರ್ಗದ ಮೂಲಕ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಕಡೆಗೆ ಸಂಚರಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಮಳೆ ಹೆಚ್ಚಾದಂತೆ ಸಮಸ್ಯೆ ಹೆಚ್ಚಾಗಲಿದೆ. ವಾಹನ ಸವಾರರು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ನೂತನ ಸೇತುವೆಯ ನಿರ್ಮಾಣವನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿ

.