ಜಿಲ್ಲೆ

ಹಿರಿಯೂರಲ್ಲಿ ಶ್ರೀ ಶಕ್ತಿ ಗಣಪತಿ ಉತ್ಸವ

ಧನಂಜಯ ಎಸ್.ಹಕಾರಿ.

ಹಿರಿಯೂರು: ಇಲ್ಲಿನ ಶ್ರೀ ಶಕ್ತಿ ಗಣಪತಿ ಪೂಜಾ ಸಮಿತಿಯಿಂದ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಯಿತು.

ನಗರದ ಹೃದಯ ಭಾಗದಲ್ಲಿರುವ ನೆಹರು ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಗಣೇಶೋತ್ಸವದ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿದವು.

ಕಳೆದ 50 ವರ್ಷದಿಂದ ನೆಹರು ಮೈದಾನದಲ್ಲಿ ಅದ್ದೂರಿಯಾಗಿ ಒಂದು ತಿಂಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಗಣೇಶೋತ್ಸವ

ಆಚರಿಸಲಾಗುತ್ತಿದ್ದು, ಈ ಬಾರಿ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಜನರಲ್ಲಿ ನೆಮ್ಮದಿ ಕರುಣಿಸಲಿ ಎಂದು ಭಕ್ತರು ಪ್ರಾರ್ಥಿಸಿದ್ದು ವಿಶೇಷವಾಗಿತ್ತು.

ಶ್ರೀ ಶಕ್ತಿ ಗಣಪತಿ ಪೂಜಾ ಸಮಿತಿ ಪದಾಧಿಕಾರಿಗಳಾದ ಎಂ.ಎಸ್.ರಾಘವೇಂದ್ರ, ವಿಶ್ವನಾಥ್, ವೆಂಕಟೇಶ್, ಕೇಶವಮೂರ್ತಿ, ಎ.ರಾಘವೇಂದ್ರ, ಪ್ರಕಾಶ್ ಕುಮಾರ್, ಉಮಾಶಂಕರ್, ಮಹೇಶ್, ಸತೀಶ್ ಬಾಬು, ರಾಜಕುಮಾರ್, ನಾಗೇಶ್, ಪ್ರಭಾಕರ್, ಗೋಪಿನಾಥ್ ಇತರರಿದ್ದರು.