ಕಿಕ್ಕೇರಿ: ಜಿಲ್ಲೆಯಲ್ಲಿ ಸಂಘ ವಹಿವಾಟಿನಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ. ಹರೀಶ್ ತಿಳಿಸಿದರು.
ಗ್ರಾಮದಲ್ಲಿ ಇತ್ತೀಚಿಗೆ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. 4700 ಷೇರುದಾರರು ಇರುವ ಸಂಘದಲ್ಲಿ ರೈತರಿಗೆ ಬೆಳೆಸಾಲ ನೀಡಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ಪುಟ್ಟರಾಜು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 73 ಕೋಟಿ ರೂ. ವಹಿವಾಟಿನೊಂದಿಗೆ 42 ಲಕ್ಷ ರೂ. ಲಾಭಾಂಶ ಪಡೆದಿದೆ. 18 ಕೋಟಿ ರೂ. ಸಾಲ ನೀಡಿದ್ದು, ಇದರಲ್ಲಿ ಆಭರಣ ಸಾಲ 7.5 ಕೋಟಿ ರೂ, ವ್ಯವಸಾಯೇತರವಾಗಿ 59 ಲಕ್ಷ ರೂ. ಹಾಗೂ ಬೆಳೆಸಾಲ 7.93 ಕೋಟಿ ರೂ. ಸಾಲ ನೀಡಿದ್ದೇವೆ ಎಂದರು.
ಉಪಾಧ್ಯಕ್ಷ ಎಂ.ಕೆ.ಶ್ರೀನಾಥ್, ನಿರ್ದೇಶಕರಾದ ನಾರಾಯಣಸ್ವಾಮಿ, ಮನೋಜ್‌ಕುಮಾರ್, ಡಿ. ತಾರಾನಾಥ್, ಮುರುಳೀಧರ್, ಸುರೇಶ್, ಪಾಪೇಗೌಡ, ಕೆ.ಎಸ್.ಶಿವರಾಮಯ್ಯ, ರಘು, ಹರೀಶ್‌ನಾಯಕ್, ಕೋಮಲ ಪುಟ್ಟೇಗೌಡ, ಉಪ ವ್ಯವಸ್ಥಾಪಕಿ ಭಾರತಿ, ಸಿಬ್ಬಂದಿ ಬಾಬು, ನರಸಿಂಹ, ಮಲ್ಲಿಕ, ವೆಂಕಟೇಶ್, ಕೆ.ಆರ್. ಶೋಭಾ, ಮಮತಾ, ಆಶಾ ಇದ್ದರು.