ಐದ್ರೋಡ್ಡಮ್ಮ ದೇವಿಯನ್ನು ಅಲಂಕರಿಸಿರುವುದು. 
ಜಿಲ್ಲೆ

ಐದ್ರೋಡಮ್ಮ ದೇವಿಗೆ ವಿವಿಧ ಪೂಜಾ ಕೈಂಕರ್ಯ

ಅಭಿನಯ್ ಎಚ್.ಎಂ

ಸಿದ್ದಾಪುರ: ಅರೆಕಾಡು ಸಮೀಪದ ಬಳಂಜಿಗೆರೆಯ ಶ್ರೀ ಐದ್ರೋಡಮ್ಮ ದೇವಿಯ 17ನೇ ವಾರ್ಷಿಕ ಮಹೋತ್ಸವ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಸತ್ಯನಾರಾಯಣ ದೇವಾಲಯದ ಪ್ರಧಾನ ಅರ್ಚಕ ರಘು ಭಟ್ ನೇತೃತ್ವದಲ್ಲಿ ಗಣಪತಿ ಹೋಮ, ನಂತರ ದೇವರ ಅಲಂಕಾರ ಪೂಜೆ, ಕುಂಕುಮಾರ್ಚನೆ, ಮಹಾಪೂಜೆ ನಂತರ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು

ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆ ದಿನದಂದು ನಡೆಯುವ ಈ ಜಾತ್ರೆಗೆ ಕರ್ನಾಟಕವಲ್ಲದೆ, ತಮಿಳುನಾಡು, ಆಂಧ್ರ, ಕೇರಳದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲಿದ್ದಾರೆ.

ದೇವಾಲಯದ ಆಡಳಿತ ಮಂಡಳಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ತಿರುಮಲರಾಜ್, ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಚಂದ್ರ, ಖಜಾಂಚಿ ಲೋಕೇಶ್, ಪ್ರಮುಖರಾದ ಅಪ್ಪು ರವೀಂದ್ರ, ಪ್ರಭುಶೇಖರ್ ಮುಂತಾದವರು ಹಾಜರಿದ್ದರು.