ಚಿಕ್ಕೋಡಿ ಗ್ರಾಮೀಣ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 4.54 ಕೋಟಿ ರೂ. ವೆಚ್ಚದ ವಿವಿಧ ರಸ್ತೆ ಅಭಿವೃದಿಟಛಿ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಮಂಗಳವಾರ ಚಾಲನೆ ನೀಡಿದರು.
ಯಕ್ಸಂಬಾ ಪಟ್ಟಣದ ಮಹಾದೇವ ಮಂದಿರದಿಂದ ಸಮುದಾಯ ಆರೋಗ್ಯ ಕೇಂದ್ರದ ವರೆಗೆ 1.20 ಕೋಟಿ ರೂ. ವೆಚ್ಚದ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಅಂಕಲಿ ವರೆಗೆ 2.50 ಕೋಟಿ ರೂ. ವೆಚ್ಚದ ರಸ್ತೆ, ಯಕ್ಸಂಬಾ ಚನ್ನಮ್ಮ ಸರ್ಕಲ್ನಿಂದ ಮಹಾದೇವ ಮಂದಿರದವರೆಗೆ ಅಂದಾಜು 84.50 ಲ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಪಟ್ಟಣ ಪಂಚಾಯಿತಿ ಅಧ್ಯ ಸುನೀಲ ಸಪ್ತಸಾಗರೆ, ಪಟ್ಟಣ ಪಂಚಾಯಿತಿ ಉಪಾಧ್ಯೆ ಸುಜಾತಾ ಚಿತಳೆ, ಸದಸ್ಯರಾದ ಕಿರಣ ಮಾಳಿ, ರವೀಂದ್ರ ಮಾನೆ, ಶಿವಗೌಡ ಬಾವಚೆ, ಚಿದಾನಂದ ಬೆಳ್ಳೆ, ಉಮೇಶ ಸಾತ್ವರ, ಅಂಕುಶ ಖೋತ್, ಜಮ್ಮನಶಾ ಮಕಾನದಾರ್, ರವೀಂದ್ರ ಖೋತ್, ವಿಠ್ಠಲ ನಾಯಿಕ, ಸೈಹೀದಾ ಮುಲ್ಲಾ, ಪ್ರೇಮಾ ಮಾಳಗೆ, ರಾಜಶ್ರೀ ಮಗದುಮ್ಮ, ಸಂಗೀತಾ ಪವಾರ, ಶಾನಕ್ಕ ರಾಂಗೋಳೆ, ಮಹಾಲಿಂಗ ವಸ್ತ್ರದ, ಜ್ಯೋತಿ ಸಾತ್ವರ, ಮುನೀರ ದಾಡಿವಾಲೆ ಇತರರಿದ್ದರು.