ಜಿಲ್ಲೆ

ವಿವಿಧ ಧಾರ್ವಿುಕ ಕಾರ್ಯಕ್ರಮ ಫೆ. 7ರಿಂದ

ಬಸವರಾಜ ವೀರಪ್ಪ ಗರಗ

ಯಲ್ಲಾಪುರ: ಕ್ಯಾನ್ಸರ್ ಹಾಗೂ ವಿವಿಧ ರೋಗಗಳ ನಿವಾರಣೆ, ರೈತರಿಗೆ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಪ್ರಾರ್ಥಿಸಿ ತಾಲೂಕಿನ ಇಡಗುಂದಿಯ ರಾಮಲಿಂಗ ದೇವಸ್ಥಾನದಲ್ಲಿ 2025ರ ಫೆ. 7ರಿಂದ 11 ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವರ್ಣವಲ್ಲೀ ಶ್ರೀಗಳ ನಿರ್ದೇಶನದಂತೆ ಯಲ್ಲಾಪುರ ಸೀಮಾ ಪರಿಷತ್ ನೇತೃತ್ವದಲ್ಲಿ ಭಕ್ತರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಗಣಹವನ, ಧನ್ವಂತರಿ, ಸುಬ್ರಹ್ಮಣ್ಯ ಹವನ, ನವಚಂಡಿ, ಮಹಾ ಮೃತ್ಯುಂಜಯ ಹವನ, ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಐದು ದಿನಗಳ ಕಾಲ ನಡೆಯಲಿದೆ. ಪ್ರತಿದಿನ ಸಂಜೆ ವಿದ್ವಾಂಸರಿಂದ ಧಾರ್ವಿುಕ ಉಪನ್ಯಾಸ ನಡೆಯಲಿದೆ. ಕೊನೆಯ ದಿನ ಸ್ವರ್ಣವಲ್ಲೀ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವದಿಸಲಿದ್ದಾರೆ.

ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆ ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಅಧ್ಯಕ್ಷತೆಯಲ್ಲಿ ನಡೆಯಿತು. ವಿವಿಧ ಸಮಿತಿಗಳ ಪ್ರಮುಖರಾದ ಡಿ. ಶಂಕರ ಭಟ್ಟ, ನಾರಾಯಣ ಭಟ್ಟ ಏಕಾನ ವೇ. ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ, ವಿ.ಎನ್. ಭಟ್ಟ, ಚಂದ್ರಕಲಾ ಭಟ್ಟ, ಶ್ರೀಪಾದ ಕೆರೆಗದ್ದಡ, ಅಣ್ಣಯ್ಯ ಭಾಗ್ವತ, ಸೀತಾರಾಮ ಗಾಂವ್ಕರ, ತಿಮ್ಮಣ್ಣ ಭಾಗ್ವತ, ಇತರರಿದ್ದರು.