ರಟ್ಟಿಹಳ್ಳಿ: ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನ ಮತ್ತು ಮಹಾಲಿಂಗ ಸ್ವಾಮಿ ಗದ್ದುಗೆಯ ಸನ್ನಿಧಿಯಲ್ಲಿ ಜು. 7 ಮತ್ತು 8ರಂದು ವಿವಿಧ ಧಾರ್ವಿುಕ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ಜರುಗಲಿದೆ. ಜು. 7ರಂದು ರಾತ್ರಿ 10 ಗಂಟೆಯ ನಂತರ ಪಟ್ಟಣದ ಶ್ರೀ ಬೀರಲಿಂಗೇಶ್ವರ, ಶ್ರೀ ವೀರಭದ್ರೇಶ್ವರ ಮತ್ತು ಹೊಳೆಸಾಲು ದುರ್ಗಾದೇವಿ ದೇವರುಗಳ ಪಲ್ಲಕ್ಕಿ ಉತ್ಸವದೊಂದಿಗೆ ಪಟ್ಟಣದಲ್ಲಿನ ಕರೆಗಲ್ಲುಗಳಿಗೆ ಅಭಿಷೇಕ ಪೂಜೆ ಸಲ್ಲಿಸಿ ಬಳಿಕ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಆಗಮಿಸಿ ಪೂಜಾ ಕೈಂಕರ್ಯಗಳು ಜರುಗುವುದು. ಜು. 8ರಂದು ಬೆಳಗ್ಗೆ ದೇವಿಗೆ ಅಭಿಷೇಕ ವಿಶೇಷ ಪೂಜೆ ಸಲ್ಲಿಸಿ 11 ಗಂಟೆಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಜರುಗಲಿದೆ.
ಮಳೆ ಬೆಳೆಗಾಗಿ ಪ್ರಾರ್ಥನೆ: ಪ್ರತಿ ವರ್ಷವೂ ಜುಲೈ ಮೊದಲ ವಾರದಲ್ಲಿ ಜರುಗಲಿರುವ ಈ ಕಾರ್ಯಕ್ರಮದ ಮೂಲಕ ಸಮೃದ್ಧವಾದ ಮಳೆ ಮತ್ತು ಬೆಳೆಗಾಗಿ ಪ್ರಾರ್ಥನೆ ಸಲ್ಲಿಸುವುದು ಪದ್ದತಿಯಾಗಿದೆ. ಸಾವಿರಾರರು ಸಂಖ್ಯೆಯ ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ದೇವಿ ದರ್ಶನ ಪಡೆಯ್ತುತಾರೆ.