ಜಿಲ್ಲೆ

ಸಹಕಾರ ಸಂಘದಿಂದ ಸದಸ್ಯರಿಗೆ ವಿವಿಧ ಸೌಲಭ್ಯ

ಮಡಿಕೇರಿ: ಇದೀಗ ಸಹಕಾರ ಸಂಘಗಳು ವಿವಿಧೊದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವಾಗಿ ಮಾರ್ಪಾಡಾಗಿರುವುದರಿಂದ ಸಂಘದ ಸದಸ್ಯರುಗಳಿಗೆ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ಹೊಂದಿಕೊಳ್ಳಲು ಅವಕಾಶವಿರುವುದಾಗಿ ಕೊಕ್ಕಲೇರ ಸುಜು ತಿಮ್ಮಯ್ಯ ಹೇಳಿದರು.


ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಇದುವರೆಗೆ ಕೃಷಿ ಪ್ರಾಥಮಿಕ ಸಹಕಾರ ಸಂಘವಾಗಿದ್ದ ಎಲ್ಲ ಸಹಕಾರ ಸಂಘಗಳನ್ನು ವಿವಿಧೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರವೆಂದು ಮಾರ್ಪಡಿಸಿ ಏಕರೂಪದ ಬೈಲಾ ಜಾರಿಗೆ ತರಲಾಗಿದೆ. ಇದುವರೆಗೆ ಕೃಷಿಗೆ ಸಂಬಂಧಿಸಿದಂತೆ ಮಾತ್ರ ಸೌಲಭ್ಯಗಳನ್ನು ಹೊಂದಿಕೊಳ್ಳಬಹುದಾಗಿತ್ತು. ಇದೀಗ ನೂತನ ಮಾರ್ಪಾಡಿನಿಂದಾಗಿ ಬೇರೆ, ಬೇರೆ ವಿವಿಧ ರೀತಿಯ ಸೌಲಭ್ಯಗಳನ್ನು ಹೊಂದಿಕೊಳ್ಳಬಹುದು ಎಂದು ತಿಳಿಸಿದರು.


ಸಂಘವು ೨೦೨೨-೨೩ನೇ ಸಾಲಿನಲ್ಲಿ ಸದಸ್ಯರ ಪಾಲು ಹಣ, ವಿವಿಧ ಸಾಲ ನೀಡಿಕೆ, ವಿವಿಧ ನಿಧಿಗಳ ಸಹಿತ ಒಟ್ಟು ರೂ.೧೮,೬೩,೪೦೪ರಷ್ಟು ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರುಗಳಿಗೆ ಶೇ.೧೦ರಷ್ಟು ಡಿವಿಡೆಂಡ್ ನೀಡಲಾಗಿದೆ ಎಂದು ಮಾಹಿತಿ ನೀಡಿದ ಅವರು, ಸಂಘದ ಪರವಾಗಿ ಮಕ್ಕಂದೂರು ಹಾಗೂ ಮುಕ್ಕೋಡ್ಲು ಭಾಗದಲ್ಲಿ ಪಿಗ್ಮಿ ಹಣ ಸಂಗ್ರಹ ಮಾಡಲು ಅವಕಾಶವಿದ್ದು, ಆಸಕ್ತರು ಸಂಘವನ್ನು ಸಂಪರ್ಕಿಸುವಂತೆ ಕೋರಿದರು.


ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ನಾಪಂಡ ರವಿಕುಶಾಲಪ್ಪ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಸದಸ್ಯರುಗಳು ಚರ್ಚೆಯಲ್ಲಿ ಪಾಲ್ಗೊಂಡು ಸಂದೇಹಗಳನ್ನು ಪರಿಹರಿಸಿಕೊಂಡರು.


ಸಂಘದ ಉಪಾಧ್ಯಕ್ಷ ಕುಂಬಗೌಡನ ಪ್ರಸನ್ನ, ನಿರ್ದೇಶಕರುಗಳಾದ ಕನ್ನಿಕಂಡ ಸುಬ್ಬಯ್ಯ, ಲಕ್ಕಪ್ಪನ ವಿಜೇತ, ಕೊಟ್ಟಕೇರಿಯನ ಪ್ರದೀಪ್, ಮಂಜುನಾಥ ನಾಯಕ, ಎಚ್.ಎಂ.ಸುಧಾಕರ, ಉಕ್ಕೇರಂಡ ನೀಲಮ್ಮ, ಪಿ.ಎಂ.ಸುಲೋಚನ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಎಸ್.ಸಿ.ರಾಗಿಣಿ, ಗೌರವ ಕಾರ್ಯದರ್ಶಿ ಸಿ.ಬಿ.ಕುಟ್ಟಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಪ್ರಬಾರ) ಎಂ.ಎಸ್.ಶೋಭಾವತಿ, ಗುಮಾಸ್ಥ ಎಂ.ಎಸ್.ವಿಜಯ್‌ಕುಮಾರ್ ಇತರರಿದ್ದರು.