ಜಿಲ್ಲೆ

ಹಳದಿ ಮಾರ್ಗದಲ್ಲಿ ವಿವಿಧ ಪ್ರಯೋಗ ಶುರು

Bengaluru - General - Rama Kishan K V

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್​ಡಿಎಸ್​ಒ) ಅಧಿಕಾರಿಗಳು ಸೋಮವಾರದಿಂದ ಬೊಮ್ಮನಹಳ್ಳಿಯಿಂದ ಆರ್​.ವಿ. ರಸ್ತೆ ನಡುವೆ, ಆಸಿಲೇಷನ್​ ಮತ್ತು ಎಲೆಕ್ಟ್ರಾನಿಕ್​ ಬ್ರೇಕ್​ಫೋರ್ಸ್ ಡಿಸ್ಟ್ರಿಬೂಷನ್​ (ಇಬಿಡಿ) ಪ್ರಯೋಗಗಳನ್ನು ಆರಂಭಿಸಿದ್ದಾರೆ.

ಈ ಪ್ರಾಯೋಗಿಕ ಸಂಚಾರ 12-14 ದಿನಗಳವರೆಗೆ ನಡೆಯಲಿದೆ. ಆರ್​ಡಿಎಸ್​ಒ ಪ್ರಾಯೋಗಿಕ ವರದಿ ಸಲ್ಲಿಸಿದ ನಂತರ ರೈಲ್ವೆ ಮಂಡಳಿಯಿಂದ ತಾಂತ್ರಿಕ ಮಂಜೂರಾತಿ ಪಡೆಯಲಾಗುವುದು ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ಆಸಿಲೇಷನ್​ ಮತ್ತು ಇಬಿಡಿ ಪ್ರಯೋಗದಲ್ಲಿ, ಮೆಟ್ರೋ ರೈಲಿನಲ್ಲಿ ಮರಳು ಮೂಟೆಯನ್ನು ತುಂಬಿಸಿ ಭಾರ ಪರೀಕ್ಷೆ ಮಾಡಲಾಗುತ್ತದೆ. ಬೋಗಿಯಲ್ಲಿ ನೀರನ್ನು ತುಂಬಿಸಿ ನಿಯಂತ್ರಣ ಪರೀಕ್ಷೆ ಮಾಡಲಾಗುತ್ತದೆ. ವೇಗವಾಗಿ ಹಾಗೂ ನಿಧಾನಕ್ಕೆ ಚಲಿಸುತ್ತ ರೈಲನ್ನು ನಿಯಂತ್ರಣಕ್ಕೆ ತರುವುದನ್ನು ಪರೀಕ್ಷಿಸಲಾಗುತ್ತದೆ.