ಜಿಲ್ಲೆ

ರಾಯರ ಮಠದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮ

Gadag - Desk - Tippanna Avadoot

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ರಾಮಕೃಷ್ಣ ನಗರದ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಆ. 31ರಿಂದ ಸೆ. 2ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆ. 31ರಿಂದ ನಿತ್ಯ ಬೆಳಗ್ಗೆ 6 ಗಂಟೆಗೆ ಸುಪ್ರಭಾತ, 7 ಗಂಟೆಗೆ ಅಷ್ಟೋತ್ತರ ಪಾರಾಯಣ, 9 ಗಂಟೆಗೆ ಪಂಚಾಮೃತ ಅಭಿಷೇಕ, 10 ಗಂಟೆಗೆ ಪುಷ್ಪಾಲಂಕಾರ, 10.30ಕ್ಕೆ ರಥೋತ್ಸವ, 12ಕ್ಕೆ ಹಸ್ತೋದಕ ಹಾಗೂ ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ.

ಸೆ. 1ರಂದು ಮಧ್ಯರಾಧನೆ ನಿಮಿತ್ತ ಬ್ರಾಹ್ಮಣರ ಅಲಂಕಾರ, ಸಂಜೆ 7 ಗಂಟೆಗೆ ಅಷ್ಟಾವಧಾನ, ತೊಟ್ಟಿಲು ಪೂಜೆ, ಮಹಾಮಂಗಳಾರತಿ, ಸೇವಾಕರ್ತರಿಗೆ ಸನ್ಮಾನ ಹಾಗೂ ಫಲಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ರಾಘವೇಂದ್ರಸ್ವಾಮಿ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.