ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿ ಸುವರ್ಣಸೌಧ ಮುಂದೆ ರಾಜ್ಯದ ಮಾಜಿ ಸೈನಿಕರು ಹಾಗೂ ವೀರನಾರಿಯರು ಪ್ರತಿಭಟನೆ ನಡೆಸಿದರು 
ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ನರೇಶ್ ಕುಮಾರ್

ಹಗರಿಬೊಮ್ಮನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿ ಸುವರ್ಣಸೌಧ ಮುಂದೆ ರಾಜ್ಯದ ಮಾಜಿ ಸೈನಿಕರು ಹಾಗೂ ವೀರನಾರಿಯರು ಪ್ರತಿಭಟನೆ ನಡೆಸಿದರು ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಆರ್.ರಾಮರೆಡ್ಡಿ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಸೈನಿಕಗೆ 5 ಎಕರೆ ಭೂಮಿ ನೀಡಬೇಕು. ಮೀಸಲಾತಿಯಡಿ ಸರ್ಕಾರದ ನಿರ್ದೇಶದಂತೆ ನಿವೇಶನ ನೀಡಬೇಕು. ಉನ್ನತ ಶಿಕ್ಷಣದಲ್ಲಿ ಮಕ್ಕಳಿಗೆ ಮೀಸಲಾತಿ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದ್ದು, ಕಾರ್ಮಿಕ ಸಚಿವ ಸಂತೋಷ್‌ಲಾಡ್ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ತಾಲೂಕು ಖಜಾಂಚಿ ಬೇವೂರ್ ಶಿವಾನಂದ, ಪ್ರಮುಖರಾದ ಎಸ್.ಟಿ.ಮಲ್ಲಿಕರ್ಜುನ, ಎಚ್.ಎಂ.ಬಸವರಾಜ್, ಕೆ.ವಿ.ಎಂ.ಚನ್ನವೀರಸ್ವಾಮಿ ಇತರರಿದ್ದರು.