ಸವದತ್ತಿ: ಬೆಳೆಹಾನಿ ಜಂಟಿ ಸಮೀೆ ನಡೆಸುವುದು, ಪರಿಹಾರ ವಿತರಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆಯಿಂದ ಪಟ್ಟಣದ ತಾಲೂಕಾಡಳಿತ ಸೌಧದ ಎದುರು ಈಚೆಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಎನ್. ಹೆಗ್ಗನ್ನವರಗೆ ಮನವಿ ಸಲ್ಲಿಸಲಾಯಿತು.
ರೈತ ಸಂದ ಕಾರ್ಯಾಧ್ಯ ಬಸವರಾಜ ಬಿಜ್ಜೂರ ಮಾತನಾಡಿ, ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಬೆಳೆಗಳು ಜಲಾವತಗೊಂಡು ನಾಶವಾಗಿವೆ. ಹೆಸರು ಮತ್ತು ಉದ್ದಿನ ಬೆಳೆಗೆ ರೋಗ ಬಂದು ಹಾಳಾಗಿದೆ. ನಿರಂತರ ಮಳೆಯಿಂದಾಗಿ ತೊಗರಿಯೂ ಕೊಳೆತಿದ್ದು, ಅಪಾರ ನಷ್ಟವಾಗಿದೆ. ಆದ್ದರಿಂದ ಕಂದಾಯ ಮತ್ತು ಕಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀೆ ನಡೆಸಬೇಕು. ಬೆಳೆ ನಷ್ಟ ಪರಿಹಾರ ೂಷಿಸುವ ಜತೆಗೆ ಬೆಳೆವಿಮೆ ಮಂಜೂರು ಮಾಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ರಾಜ್ಯ ರೈತ ಸೇನಾ ತಾಲೂಕಾಧ್ಯ ಅಲಿಸಾಬ್ ನೂಲಗಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಅತಿವಷ್ಟಿಯಿಂದ ಬೆಳೆ ಸಂಪೂರ್ಣ ನಾಶವಾಗಿದ್ದು, ವಿಮೆ ಕಂಪನಿಯಿಂದ ಪರಿಹಾರ ಬಿಡುಗಡೆ ಮಾಡಿಸಬೇಕೆಂದು ಆಗ್ರಹಿಸಿದರು. ಮುಖಂಡರಾದ ಶ್ರೀಕಾಂತ ಹಟ್ಟಿವಳಿ, ತವನಪ್ಪ ಸಾತಕ್ಕನವರ, ಸತ್ಯಪ್ಪ ಸೋಮಣ್ಣವರ, ಮಂಜು ಅಲಿನವರ, ಮುದುಕಪ್ಪ ಬೇವಿನಗಿಡದ, ಜಯನಗೌಡ ಪಾಟೀಲ, ಬಸನಗೌಡ ಪಾಟೀಲ, ಬಸಪ್ಪ ಮುತಗೊಂಡ, ಮಹೇಶ ರಾವಳ, ಎನ್.ಎಸ್. ಅಣ್ಣಿಗೇರಿ, ಶಂಕರ ಹೆಬ್ಬಳ್ಳಿ, ಹನುಮಂತ ಗುಡಿ ಇತರರಿದ್ದರು.
ಶಾಶ್ವತ ಪರಿಹಾರ ಒದಗಿಸಲು ರೆತರ ಆಗ್ರಹ: ತಾಲೂಕಿನ ಯಲ್ಲಮ್ಮನಗುಡ್ಡ ಹಾಗೂ ಕುರುವಿನಕೊಪ್ಪ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿ ಭಾರಿ ಪ್ರಮಾಣದಲ್ಲಿ ಕಬ್ಬು ಸೇರಿ ಇತರ ಬೆಳೆಹಾನಿಯಾಗಿದ್ದು, ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿ ರೆತರು ಈಚೆಗೆ ತಹಸೀಲ್ದಾರ್ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಿದರು.
ಕುರುವಿನಕೊಪ್ಪ ಮಾರ್ಗವಾಗಿ ಮಲಪ್ರಭಾ ನದಿಗೆ ಹರಿಯುವ ಸವಟಗಿ ಕೊಳ್ಳದಲ್ಲಿ ಹೂಳು ತುಂಬಿದ್ದು, ಅದರಿಂದಾಗಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿವೆ. ಕೂಡಲೇ ಹೂಳೆತ್ತುವ ಕಾರ್ಯ ನಡೆಸಿ ಪರಿಹಾರ ಒದಗಿಸಿ ಕೊಡಬೇಕೆಂದು ಆಗ್ರಹಿಸಿದರು. ಕುರುವಿನಕೊಪ್ಪದ ಗ್ರಾಮಸ್ಥರಾದ ಶಂಕ್ರಯ್ಯ ಪಾಟೀಲ, ಕಲ್ಯಾಣಪ್ಪ ಉಳ್ಳಿಗೇರಿ, ಗುರುರಾಜ ಉಳ್ಳಿಗೇರಿ, ರಾಹುಲ ರಾಠೋಡ, ಪಕ್ಕೀರಪ್ಪ ಮಾದರ, ಹಾಗೂ ಇತರರು ಇದ್ದರು.