ಜಿಲ್ಲೆ

ಶಿವರಾತ್ರಿ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಪ್ರಸಿನ್ ಕೆ.ಆರ್

ಕೆ.ಆರ್.ನಗರ: ಪಟ್ಟಣದ ಹೊರವಲಯ ಹಳೇ ಎಡತೊರೆ ಶ್ರೀ ಮೀನಾಕ್ಷಿ ಸಮೇತ ಶ್ರೀ ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಅಂಗವಾಗಿ 36ನೇ ವರ್ಷದ ಪೂಜೆ ಹಾಗೂ ಜಾಗರಣಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮಾ.8ರ ಶುಕ್ರವಾರ ರಾತ್ರಿ 8 ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಿ.ರವಿಶಂಕರ್ ವಹಿಸಿಕೊಳ್ಳಲಿದ್ದು, ಗಾವಡಗೆರೆಯ ಗುರುಲಿಂಗ ಜಂಗಮದೇವರ ಮಠದ ಶ್ರಿ ನಟರಾಜ ಸ್ವಾಮಿಜೀ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಜಿ.ಕೆ.ಹರೀಶ್, ಟಿಎಚ್‌ಒ ಡಾ.ಡಿ.ನಟರಾಜ್ ಪಾಲ್ಗೊಳ್ಳಲಿದ್ದಾರೆ.

ಸಂಜೆ 6.45 ರಿಂದ 8 ಗಂಟೆವರೆಗೆ ಕೆ.ಆರ್.ನಗರದ ಭಜನಾ ಮಂಡಳಿಯ ಲಕ್ಷ್ಮೀ ಹಾಗೂ ಸಂಗಡಿಗರಿಂದ ರಾಗಸಂಗಮ, ರಾತ್ರಿ 8 ರಿಂದ 9 ಗಂಟೆವರೆಗೆ ಹಂಪಾಪುರದ ಗೋವಿಂದರಾಜು ಮತ್ತು ಸಂಗಡಿಗರಿಂದ ನಾದಸ್ವರ, ನುಪುರ ನಾಟ್ಯಶಾಲೆಯ ಲೋಲಾಕ್ಷಿ ಮತ್ತು ತಂಡದವರಿಂದ ಭರತನಾಟ್ಯ, ರಾತ್ರಿ 10 ರಿಂದ 10.30 ರವರೆಗೆ ಪೊಲೀಸ್ ಮಹಾದೇವ್ ಅವರಿಂದ ಭಕ್ತಿಗೀತೆಗಳು, ರಾತ್ರಿ 10.30 ರಿಂದ 11.30 ರವರೆಗೆ ಮೈಸೂರಿನ ನರ್ತನಂ ಡ್ಯಾನ್ಸ್ ಇನ್ಸ್ಟಿಟ್ಯೂಟ್‌ನ ಪ್ರತಿಮಾ ಮತ್ತು ತಂಡದಿಂದ ಶಿವ ತಾಂಡವ ನೃತ್ಯ ಹಾಗೂ ನೃತ್ಯಗಳು, ರಾತ್ರಿ 11.30 ರಿಂದ 1.30ರವರೆಗೆ ಹುಣಸೂರಿನ ಗಜೇಂದ್ರ ಮತ್ತು ಸಂತೋಷ್ ಅವರಿಂದ ಭಕ್ತಿಗೀತೆಗಳು ನಡೆಯಲಿವೆ.

ರಾತ್ರಿ 1.30 ರಿಂದ 2ವರೆಗೆ ಗಾವಡಗೆರೆ ಶ್ರೀ ಮಲೆಮಹಾದೇಶ್ವರ ಕಲಾತಂಡದ ಗೋವಿಂದನಾಯಕ ರವರಿಂದ ವೀರಗಾಸೆ ನೃತ್ಯ, ರಾತ್ರಿ 2 ರಿಂದ 3 ಗಂಟೆವರೆಗೆ ಕೆ.ಆರ್.ನಗರ ಕಲಾಬಳಗದ ಎ.ಕುಮಾರ್ ಮತ್ತು ತಂಡದಿಂದ ಜನಪದ ಗೀತೆಗಳು, ರಾತ್ರಿ 3 ರಿಂದ ಬೆಳಗ್ಗೆ 5ರ ವರೆಗೆ ಹೆಬ್ಬಾಳು ಎಚ್.ಕೆ.ಪುಟ್ಟೇಗೌಡ ಮತ್ತು ತಂಡದವರಿಂದ ಭಜನೆಗಳು ಹಾಗೂ ತತ್ವಪದಗಳು, ಬೆಳಗ್ಗೆ 6 ರಿಂದ 7.30 ರವರೆಗೆ ಪತಂಜಲಿ ಯೋಗಾಶ್ರಮ ಟ್ರಸ್ಟ್ ವತಿಯಿಂದ ಹುಣಸೂರಿನ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಸ್.ಲೋಕೇಶ್ ರಿಂದ ಯೋಗಾಸನ ನೆರವೇರಲಿದೆ.