ಜಿಲ್ಲೆ

ಮಳೆಗೆ ನೆಲಕಚ್ಚಿದ ವಿವಿಧ ಬೆಳೆ

ಕೋಲಾರ ಡೆಸ್ಕ್

ಮಡಿವಾಳ: ಮಾಲೂರು ತಾಲೂಕಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ತೊರನಹಳ್ಳಿಯ ದೊಡ್ಡಪ್ಪಯ್ಯ ಎಂಬುವರಿಗೆ ಸೇರಿದ 3 ಎಕರೆ ಜಮೀನಿನಲ್ಲಿ ಹಾಕಿದ್ದ ಹುರಳಿಕಾಯಿ ಬೆಳೆ ಸಂಪೂರ್ಣ ನೆಲಕಚ್ಚಿದೆ.

ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಡಿಪುರ ಗ್ರಾಮದಲ್ಲಿ ಚರಂಡಿ ನೀರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಚೊಕ್ಕಂಡಹಳ್ಳಿಯಲ್ಲಿ ರೈತ ಸುರೇಶ್​ ಎಂಬುವರು ಒಂದು ಎಕರೆ ವಿಸ್ತೀರ್ಣದಲ್ಲಿ ಹಾಕಿದ್ದ ಹಾಗಲಕಾಯಿ ತೋಟಕ್ಕೆ ಮಳೆ ನೀರು ನುಗ್ಗಿ ಬೆಳೆ ಸಂಪೂರ್ಣ ಧರಾಶಾಯಿಯಾಗಿದೆ.

ತೊರನಹಳ್ಳಿ, ಮಡಿವಾಳ ಗ್ರಾಮದ ರಸ್ತೆಯ ಮಾರಿಕಾಂಬ ದೇವಾಲಯದ ಬಳಿ ರಸ್ತೆಯ ಮಧ್ಯದ ಹಳ್ಳದಲ್ಲಿ ಲಾರಿಯೊಂದು ಇಳಿದು ಕೆಟ್ಟು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.