ಮಡಿಕೇರಿ:
ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ನ.3 ರಂದು ಭಾನುವಾರ ನಗರದ ಓಂಕಾರ ಸದನದಲ್ಲಿ ನಿಮ್ಮ ಪ್ರತಿಭೆ- ನಮ್ಮ ವೇದಿಕೆ , ಹಿಮವನ ಸಾಂಸ್ಕೃತಿಕ ಸಂಗಮ ಎಂಬ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಮಹಿಳೆಯರು ಮತ್ತು ಮಕ್ಕಳಿಗಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷ್ಮಿ ತಿಳಿಸಿದ್ದಾರೆ.
1 ರಿಂದ 3 ವರ್ಷದ ಮಕ್ಕಳಿಗೆ ಮತ್ತು 4 ರಿಂದ 7 ವರ್ಷದ ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಹೆಸರು ನೋಂದಣಿಗಾಗಿ ಬಿ. ಸಿ. ಶಾಂತಿ 9902651146 ಅವರನ್ನು ಸಂಪರ್ಕಿಸಬಹುದು.
8 - 12 ವರ್ಷದ ಮಕ್ಕಳಿಗೆ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ. ತಂಡದಲ್ಲಿ ಕನಿಷ್ಠ 6 ಗರಿಷ್ಠ 10 ಮಕ್ಕಳು ಇರಬೇಕು, ಹಾಡು ಕನ್ನಡದ್ದೇ ಆಗಿರಬೇಕು.ಸಮಯ 4 ನಿಮಿಷ. ಹೆಸರು ನೋಂದಣಿಗಾಗಿ ಅರ್ಪಿತಾ ಸಂದೀಪ್ ಭಟ್ 7224875919 ಅವರನ್ನು ಸಂಪರ್ಕಿಸಬಹುದು.
ಪ್ರೌಢಶಾಲಾ ಮಕ್ಕಳಿಗೆ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಜಾನಪದ ಹಾಡು ಕಡ್ಡಾಯವಾಗಿದೆ. ಗುಂಪಿನಲ್ಲಿ ಕನಿಷ್ಠ 6 ಗರಿಷ್ಠ 8 ಮಕ್ಕಳು ಇರಬೇಕು. ಸಮಯ 5 ನಿಮಿಷ. ಹೆಸರು ನೋಂದಣಿಗಾಗಿ ಪದ್ಮಾವತಿ 9739323837 ಅವರನ್ನು ಸಂಪರ್ಕಿಸಬಹುದು.
ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಹಸಿರೇ ಉಸಿರು ಎನ್ನುವ ಶೀರ್ಷಿಕೆಯಲ್ಲಿ ಚಿತ್ರಕಲೆ ಸ್ಪರ್ಧೆ ನಡೆಯಲಿದೆ. 1 ಗಂಟೆ ಕಾಲಾವಕಾಶ ನೀಡಬೇಕು. ಹೆಸರು ನೋಂದಣಿಗಾಗಿ ಅನಿತಾ ಪ್ರತಾಪ್ 8971680717 ಅವರನ್ನು ಸಂಪರ್ಕಿಸಬಹುದು.
ಪದವಿ ವಿದ್ಯಾರ್ಥಿಗಳಿಗೆ ಸಮೂಹ ಗಾಯನ ದೇಶಭಕ್ತಿ ಗೀತೆ ಅಥವಾ ನಾಡಗೀತೆ ಗಾಯನ ಸ್ಪರ್ಧೆ ನಡೆಯಲಿದ್ದು ಗುಂಪಿನಲ್ಲಿ ಕನಿಷ್ಠ 5 ಗರಿಷ್ಠ 10 ಮಂದಿ ಇರಬೇಕು. ಸಮಯ 4 ನಿಮಿಷ., ಹೆಸರು ನೋಂದಣಿಗಾಗಿ ಗಿರಿಜಾಮಣಿ 9110657754 ಅವರನ್ನು ಸಂಪರ್ಕಿಸಬಹುದು.
ಮಾದಕ ವ್ಯಸನ ಮುಕ್ತ ಭಾರತ - ನನ್ನ ಕನಸು ಎನ್ನುವ ವಿಷಯದಲ್ಲಿ ಪದವಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಸಮಯ 1 ಗಂಟೆ ಇರಲಿದೆ. ಮಹಿಳೆಯರಿಗೆ ನಡೆಯುವ ಗಾಯನ ಸ್ಪರ್ಧೆಯಲ್ಲಿ ಯಾವುದೇ ಕನ್ನಡ ಹಾಡು ಹಾಡಬಹುದು. ಸಮಯ 4 ನಿಮಿಷ, ಸದಸ್ಯೆಯರ ಸಂಖ್ಯೆ ಕನಿಷ್ಠ 6 ಗರಿಷ್ಠ 10
ಹೆಸರು ನೋಂದಣಿಗಾಗಿ ಚಿತ್ರಾ ಆರ್ಯನ್ 9449044117 ಅವರನ್ನು ಸಂಪರ್ಕಿಸಬಹುದಾಗಿದೆ. ಹೆಸರು ನೋಂದಾಯಿಸಲು ಕೊನೆಯ ದಿನ ಅ. 30 ಸ್ಪಧೆ9ðಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9663129670 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.