ಮೈಸೂರು: ನಗರದ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 30ನೇ ವಾರ್ಷಿಕೋತ್ಸವದ ಅಂಗವಾಗಿ ಸೊಸೈಟಿಯ ಸದಸ್ಯರೊಂದಿಗೆ ಸಂವಾದ, ಮಕ್ಕಳು ಮತ್ತು ಕುಟುಂಬದವರಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. 8ರಿಂದ 16 ವರ್ಷದ ಸದಸ್ಯರ ಮಕ್ಕಳಿಗೆ ಭಗವದ್ಗೀತಾ ಪಠಣ ಶ್ಲೋಕ (ಯಾವುದಾದರೂ 6 ಶ್ಲೋಕ), ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಹಿಳೆ ಮತ್ತು ಪುರುಷ ಸದಸ್ಯರಿಗೆ ಜಾನಪದ, ಭಾವಗೀತೆ, ದೇವರ ನಾಮ ಗಾಯನ ಸ್ಪರ್ಧೆ, ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ವಿದ್ಯಾಸಂಸ್ಥೆ ಆವರಣದಲ್ಲಿ ಡಿ. 15ರ ಮಧ್ಯಾಹ್ನ 2ಕ್ಕೆ ಸ್ಪರ್ಧೆಗಳು ನಡೆಯಲಿವೆ. ಮಾಹಿತಿಗೆ ಮೊಬೈಲ್ ನಂ. 9591170850 ಸಂಪರ್ಕಿಸಲು ಸೊಸೈಟಿ ಪ್ರಭಾರ ಕಾರ್ಯದರ್ಶಿ ಎನ್.ವೀಣಾ ಕೋರಿದ್ದಾರೆ.