ಜಿಲ್ಲೆ

ಮತದಾರರ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆ

ಸೋಮವಾರಪೇಟೆ: ತಾಲೂಕು ಶಾಲಾ ಶಿಕ್ಷಣ ಇಲಾಖೆ, ಮತದಾರರ ಸಾಕ್ಷರತಾ ಸಂಘದ ವತಿಯಿಂದ ಮತದಾರರ ದಿನಾಚರಣೆ ಅಂಗವಾಗಿ ಚನ್ನಬಸಪ್ಪ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧೆಗಳಿಗೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷ ಸುಕುಮಾರಿ ಚಾಲನೆ ನೀಡಿದರು.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳು, ಕನ್ನಡ, ಇಂಗ್ಲಿಷ್ ಪ್ರಬಂಧ, ರಸಪ್ರಶ್ನೆ, ಭಿತ್ತಿಪತ್ರ ತಯಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ನೋಡಲ್ ಅಧಿಕಾರಿ ಶಿವಕುಮಾರ್, ಮುಖ್ಯಶಿಕ್ಷಕಿ ಯಶೋದಮ್ಮ, ತೀರ್ಪುಗಾರರಾಗಿ ಶಾಂತಳ್ಳಿ ಕ್ಲಸ್ಟರ್ ಸಿಆರ್‌ಪಿ ಚೈತ್ರಾ, ಸೋಮವಾರಪೇಟೆ ಕ್ಲಸ್ಟರ್‌ನ ಸಿಆರ್‌ಪಿ ಪ್ರೇಮಾ, ಬಿಟಿಆರ್‌ಪಿ ರಂಜಿತಾ, ಕ್ವಿಜ್ ಮಾಸ್ಟರ್ ವಿಜಯ್ ಇದ್ದರು.