ಬೆಳಗಾವಿ: ನಗರದ ಕೆಎಲ್ಎಸ್ ವಸಂತರಾವ ಪೋತದಾರ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆಯ ನಿಡಸೋಸಿಯ ಹಿರಾಶುಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ ಪೊಜೆಕ್ಟ್ ಸ್ಪರ್ಧೆ, ಇಂರ್ಟನಶಿಪ್ ಪ್ರೆಸೆಂಟೇಶನ್ ಹಾಗೂ ಆಯಿಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಪ್ರೊಜೆಕ್ಟ್ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ನಯಾಬ ಅತ್ತಾರ ಹಾಗೂ ಅವಿನಾಶ ಭಾಟಿ ಪ್ರಥಮ, ದಿಗಂಬರ ಪಾಲೇಕರ, ಶ್ರೀಪಾಟೀಲ, ಸುನೀಲ ಶಿಂಡೋಲಕರ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ. ಇಂರ್ಟನಶಿಪ್ ಪ್ರೆಸೆಂಟೇಶನ್ಸ್ಪರ್ಧೆಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಅಥರ್ವ ಕಸಬೇಕರ, ಆದಿತ್ಯಾ ಕಡ್ಡು ಹಾಗೂ ನಲಿನಿ ಚಂದಗಡಕರ ತೃತೀಯ ಸ್ಥಾನ ಪಡೆದಿದ್ದಾರೆ.
ಆಯಿಡಿಯಾ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ನಯಾಬ ಅತ್ತಾರ ಹಾಗೂ ಅವಿನಾಶ ಭಾಟಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧ್ಯಕ್ಷ ಯು.ಎನ್.ಕಾಲಕುಂದ್ರಿಕರ ಹಾಗೂ ಪ್ರಾಚಾರ್ಯ ಎಸ್.ಎಸ್. ಮಾಳಾಜ, ಅನುರಾಧಾ ದೇಸಾಯಿ, ಪ್ರಥಮೇಶ ಗುರಜರ ಅಭಿನಂದಿಸಿದ್ದಾರೆ.