ಜಿಲ್ಲೆ

ಕೊಡಗು ಗೌಡ ವಿದ್ಯಾ ಸಂಘದಿಂದ ವಿವಿಧ ಸ್ಪರ್ಧೆ

ಆದರ್ಶ್. ಎಂ.ಕೆ.

ಮಡಿಕೇರಿ: ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ೭೬ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಗೌಡ ಜನಾಂಗದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಿತು.


ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬೆಕಲ್ ನವೀನ್, ಜನಾಂಗದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ಕರೆ ನೀಡಿದರು.


ಪುಟಾಣಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೇರಿಯನ ಪ್ರಣವಿ ಹಾಗೂ ಪೇರಿಯನ ಮಾನ್ಯ ಪ್ರಾರ್ಥಿಸಿದರೆ, ಪರಿಚನ ಸತೀಶ್, ಪುದಿನೆರವನ ರೇವತಿ ರಮೇಶ್ ಹಾಗೂ ಕೆದಂಬಾಡಿ ಕಾಂಚನ ನಿರೂಪಿಸಿದರು.


ಸ್ಪರ್ಧಾ ವಿಜೇತರು: ಛದ್ಮವೇಶ ಸ್ಪರ್ಧೆಯಲ್ಲಿ ಕೊಂಪುಳಿರ ಧ್ವನಿ ಪ್ರಥಮ, ಕರ್ಣಯನ ಯುಕ್ತ ದ್ವಿತೀಯ, ಅಯ್ಯಂಡ್ರ ಶಾನ್ ಚಂಗಪ್ಪ ತೃತೀಯ ಸ್ಥಾನ ಪಡೆದುಕೊಂಡರು. ಚಿತ್ರಕಲೆ ಸ್ಪರ್ಧೆಯಲ್ಲಿ ಸೊರ್ಣಂಗೇರಿ ನಿಶ್ಮಿತಾ(ಪ್ರ), ಮೂಲೆಮಜಲು ಆರ್ಥ ಪೊನ್ನಪ್ಪ(ದ್ವಿ), ಮೂಲೆಮಜಲು ಆರ್ಹ ಪೊನ್ನಪ್ಪ (ತೃ), ಗೌಡ ಮನೆತನದ ಹೆಸರುಗಳನ್ನು ಹೇಳುವ ಸ್ಪರ್ಧೆಯಲ್ಲಿ ಪರಿಚನ ಜನ್ಯ ಹರೀಶ್(ಪ್ರ), ಕಾಳೇರಮ್ಮನ ರಾಜೇಶ್(ದ್ವಿ), ನಡುವಟ್ಟೀರ ಹಿಮಾನಿ ತೃತೀಯ ಬಹುಮಾನ ಪಡೆದರು.


ಗೌಡ ಸಂಸ್ಕೃತಿಯ ಪ್ರಬಂಧ ಸ್ಪರ್ಧೆಯಲ್ಲಿ ಪಳಂಗೋಟು ತುಳಸಿ(ಪ್ರ), ದೇಶಕೋಡಿ ಮಾನ್ಯ(ದ್ವಿ) ಹಾಗೂ ಅಮ್ರಾಟಿ ವೀಕ್ಷಾ ಗೌಡ(ತೃ), ಸ್ವಾತಂತ್ರ್ಯ ಹೋರಾಟದಲ್ಲಿ ಗೌಡ ಜನಾಂಗದ ಪಾತ್ರ ಪ್ರಬಂಧ ಸ್ಪರ್ಧೆಯಲ್ಲಿ ಕರ್ಣಯನ ಸುಶ್ಮಿತ(ಪ್ರ), ನಿಡ್ಯಮಲೆ ಪ್ರಕೃತಿ(ದ್ವಿ), ಬಾರನ ಸುಭಿಕ್ಷಾ ಹಾಗೂ ಕೋರನ ಹೃರ್ತ್ಪೂವಿಕ ತೃತೀಯ ಬಹುಮಾನ ಪಡೆದುಕೊಂಡರು.


ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಪಾಲಕರಿಗೆ ನಡೆದ ಅರೆಭಾಷೆ ಹಾಡಿನ ಸ್ಪರ್ಧೆಯಲ್ಲಿ ಕುಲ್ಲಚ್ಚನ ಭಾಗೀರತಿ ಪ್ರಥಮ, ಕಾಳೇರಮ್ಮನ ರಷಿ ದ್ವಿತೀಯ ಹಾಗೂ ಪೈಕೇರ ಸುಚಿ ಮನೋಹರ ತೃತೀಯ ಬಹುಮಾನ ಗಳಿಸಿದರು. ಕೋಡಿ ಭರತ್, ಮಿಲನಾ ಭರತ್, ಪರಿಚನ ತೇಜಸ್ವಿನಿ ಹಾಗೂ ಪಟ್ಟಡ ಮಂಜುಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ ಮಕ್ಕಳೊಂದಿಗೆ ಅಭಿಪ್ರಾಯ ಹಂಚಿಕೊಂಡರು.